500 ಸರ್ಕಾರಿ ಶಾಲೆಗೆ ‘ಡಿಜಿಟಲ್‌ ಹಲಗೆ’

7
ಶಾಲಾ ಕೊಠಡಿಗಳಿಗೆ ಹೈಟೆಕ್‌ ಸ್ಪರ್ಶ

500 ಸರ್ಕಾರಿ ಶಾಲೆಗೆ ‘ಡಿಜಿಟಲ್‌ ಹಲಗೆ’

Published:
Updated:
Deccan Herald

ನವದೆಹಲಿ: ಕೇಂದ್ರ ಸರ್ಕಾರದ ಸಮಗ್ರ ಶಿಕ್ಷಣ ಅಭಿಯಾನದ (ಎಸ್‌ಎಸ್‌ಎ) ಅಡಿ ಕರ್ನಾಟಕದ 500 ಸರ್ಕಾರಿ ಶಾಲೆಗಳು ಶೀಘ್ರದಲ್ಲಿಯೇ ‘ಸ್ಮಾರ್ಟ್‌ ಬೋರ್ಡ್‌’ ಭಾಗ್ಯ ಪಡೆಯಲಿವೆ.

ಸಾಂಪ್ರದಾಯಿಕ ಕಪ್ಪುಹಲಗೆಗಳನ್ನು ಬದಲಿಸಿ ಸ್ಮಾರ್ಟ್‌ ಬೋರ್ಡ್‌ ಅಳವಡಿಸುವ ರಾಜ್ಯ ಸರ್ಕಾರದ ‘ಡಿಜಿಟಲ್‌ ಕ್ಲಾಸ್‌ರೂಂ’ ಪ್ರಸ್ತಾವನೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸಮ್ಮತಿ ಸೂಚಿಸಿದೆ.

ಯೋಜನೆ ಜಾರಿಯ ನಂತರ ಶಾಲೆಗಳಲ್ಲಿ ಕಂಡುಬಂದ ಪ್ರಗತಿ ವರದಿಯನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ಕಲಿಕಾ ಮತ್ತು ಬೋಧನಾ ಸಾಮಗ್ರಿಗಳ ಕಾರ್ಯನಿರ್ವಹಣೆ, ದುರಸ್ತಿ ಇತ್ಯಾದಿ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.

ಶಾಲಾ ಶಿಕ್ಷಣದ ಗುಣಮಟ್ಟ ಸುಧಾರಿಸುವ ಮಹತ್ವದ ಉದ್ದೇಶದಿಂದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಸಮಗ್ರ ಶಿಕ್ಷಣ ಅಭಿಯಾನದ ಅಡಿ ‘ಆಪರೇಷನ್‌ ಡಿಜಿಟಲ್‌ ಬೋರ್ಡ್‌’ ಯೋಜನೆ ಯನ್ನು ರೂಪಿಸಿದೆ.

ಕೇಂದ್ರ ಸರ್ಕಾರ ಕಂಪ್ಯೂಟರ್‌ ಮತ್ತು ಲ್ಯಾಪ್‌ಟ್ಯಾಪ್‌ಗಳಿಗೆ ವಿಶೇಷ ಸಾಫ್ಟ್‌ವೇರ್‌ ಅಳವಡಿಸುವಂತೆ ಸೂಚಿಸಿದೆ.ಕಂಪ್ಯೂಟರ್‌ ಆನ್‌ ಮತ್ತು ಆಫ್‌ ಮಾಡಿದ ಮಾಹಿತಿಯು ಸಚಿವಾಲಯದ ಕೇಂದ್ರೀಕೃತ ದತ್ತಾಂಶ ಸಂಗ್ರಹ ವ್ಯವಸ್ಥೆಯಲ್ಲಿ ದಾಖಲಾಗಲಿದೆ.

ಆಪರೇಷನ್‌ ಡಿಜಿಟಲ್‌ ಬೋರ್ಡ್‌

ಮೊದಲ ಹಂತದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ‘ಆಪರೇಷನ್‌ ಡಿಜಿಟಲ್‌ ಬೋರ್ಡ್‌‘ ಅನುಷ್ಠಾನಗೊಳ್ಳಲಿದೆ.

ಜಿಲ್ಲೆ ಶಾಲೆಗಳ ಸಂಖ್ಯೆ

ಬಾಗಲಕೋಟೆ:  26

ಬೀದರ: 13

ಬಳ್ಳಾರಿ 18

ಚಿತ್ರದುರ್ಗ 15

ದಾವಣಗೆರೆ 27

ಧಾರವಾಡ 10

ಗದಗ 11

ಬೆಳಗಾವಿ 31

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ 34 

ಹಾವೇರಿ 20

ಕೊಪ್ಪಳ 9

ಕಲಬುರ್ಗಿ 13

ರಾಯಚೂರು 3

ವಿಜಯಪುರ 16

ಯಾದಗಿರಿ 2

ಬೆಂಗಳೂರು ಗ್ರಾಮಾಂತರ ಜಿಲ್ಲೆ 14

ಬೆಂಗಳೂರು ಉತ್ತರ 14

ಬೆಂಗಳೂರು ದಕ್ಷಿಣ 16

ತುಮಕೂರು 25

ಚಿಕ್ಕಬಳ್ಳಾಪುರ 20

ಕೋಲಾರ 6

ರಾಮನಗರ 13 

ಚಿಕ್ಕಮಗಳೂರು 21

ಕೊಡಗು 18

ದಕ್ಷಿಣ ಕನ್ನಡ 17

ಉಡುಪಿ 23

ಉತ್ತರ ಕನ್ನಡ 14 

ಶಿವಮೊಗ್ಗ 19

ಮೈಸೂರು 30

ಚಾಮರಾಜನಗರ 28 

ಹಾಸನ 36 

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !