ಪಥಸಂಚಲನ ವೇಳೆ ಸಚಿವರ ಆಕಳಿಕೆ!

7

ಪಥಸಂಚಲನ ವೇಳೆ ಸಚಿವರ ಆಕಳಿಕೆ!

Published:
Updated:
Deccan Herald

ಬಳ್ಳಾರಿ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ 72ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದ ಬಳಿಕ ನಡೆದ ಪಥ ಸಂಚಲನದ ವೇಳೆ ಗೌರವ ವಂದನೆ ಸ್ವೀಕರಿಸುತ್ತಲೇ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಸಂಪೂರ್ಣ ಬಾಯಿ ತೆರೆದು ಆಕಳಿಸಿದರು. ಆ ಸಂದರ್ಭದಲ್ಲಿ ಅವರ ಅಕ್ಕಪಕ್ಕ ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್‌ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್‌ ನಿಂತಿದ್ದರು.

ಪಥ ಸಂಚಲನದಲ್ಲಿ ಪಾಲ್ಗೊಂಡ ತಂಡಗಳು ಗೌರವ ವಂದನೆ ಸಲ್ಲಿಸಿ ಮುಂದೆ ಸಾಗುತ್ತಿದ್ದಂತೆಯೇ ತಮ್ಮ ಬಲಗೈಯನ್ನು ಕೆಲವು ಬಾರಿ ಕೆಳಕ್ಕಿಳಿಸಿದ ಸಚಿವರು ಗಲ್ಲವನ್ನು ಕೆರೆದುಕೊಂಡರು. ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಸುದ್ದಿಗಾರರ ಪ್ರಶ್ನೆಗಳನ್ನು ಆಕಳಿಸುತ್ತಲೇ ಆಲಿಸಿದರು.

 

ಬರಹ ಇಷ್ಟವಾಯಿತೆ?

 • 8

  Happy
 • 4

  Amused
 • 3

  Sad
 • 0

  Frustrated
 • 6

  Angry

Comments:

0 comments

Write the first review for this !