ಸೋಮವಾರ, ಅಕ್ಟೋಬರ್ 21, 2019
24 °C

ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಉಚ್ಚಾಟಿತ, ಅನರ್ಹ ಶಾಸಕರ ಉಪಾಹಾರ ಕೂಟ

Published:
Updated:
Prajavani

ಮೈಸೂರು: ವಿಜಯದಶಮಿ ಆಚರಣೆಗಾಗಿ ಮಂಗಳವಾರ ಮೈಸೂರಿಗೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ, ಬಿಎಸ್‌ಪಿಯಿಂದ ಉಚ್ಚಾಟಿತರಾಗಿರುವ ಕೊಳ್ಳೇಗಾಲ ಶಾಸಕ ಎನ್.ಮಹೇಶ್, ಹುಣಸೂರಿನ ಅನರ್ಹ ಶಾಸಕ ಅಡಗೂರು ಎಚ್.ವಿಶ್ವನಾಥ್ ಮಂಗಳವಾರ ಬೆಳಿಗ್ಗೆ ಉಪಾಹಾರ ಕೂಟದಲ್ಲಿ ಭಾಗಿಯಾದರು.

ಚಾಮುಂಡೇಶ್ವರಿ ಬೆಟ್ಟದ ಪಾದದಲ್ಲಿರುವ ಸುತ್ತೂರಿನ ಶಾಖಾ ಮಠಕ್ಕೆ ಯಡಿಯೂರಪ್ಪ ಭೇಟಿ ನೀಡಿದ್ದರು. ಈ ಸಂದರ್ಭ ಈ ಇಬ್ಬರೂ ಅವರ ಜತೆಯಲ್ಲಿದ್ದರು.

ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಯಡಿಯೂರಪ್ಪ, ಈಗಿನ ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜತೆ ಕೆಲ ಹೊತ್ತು ಗೋಪ್ಯ ಮಾತುಕತೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಜತೆಯಲ್ಲಿದ್ದರು.

ಎರಡು ಬಸ್‌ಗಳಲ್ಲಿ ಅರಮನೆಗೆ: ಬೆಂಗಳೂರಿನಿಂದ ಬಂದಿದ್ದ ಸಚಿವರು, ಶಾಸಕರು  ಲಲಿತ್ ಮಹಲ್ ಪ್ಯಾಲೇಸ್‌ನಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಒಂದೇ ಬಸ್ಸಿನಲ್ಲಿ ಅರಮನೆ ಆವರಣಕ್ಕೆ ತೆರಳಿದರೆ, ಇವರ ಕುಟುಂಬ ವರ್ಗದವರು ಮತ್ತೊಂದು ಐಷಾರಾಮಿ ಬಸ್‌ನಲ್ಲಿ ಹಿಂಬಾಲಿಸಿ ಅರಮನೆ ಪ್ರವೇಶಿಸಿದರು. ಜಂಬೂ ಸವಾರಿ ವೀಕ್ಷಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)