ಪುಟ್ಟರಂಗಶೆಟ್ಟಿ ಚೆಕ್‌ನಲ್ಲಿ ಹಣ ಪಡೆದಿಲ್ವಲ್ಲ: ಡಿ.ಕೆ. ಶಿವಕುಮಾರ್‌

7

ಪುಟ್ಟರಂಗಶೆಟ್ಟಿ ಚೆಕ್‌ನಲ್ಲಿ ಹಣ ಪಡೆದಿಲ್ವಲ್ಲ: ಡಿ.ಕೆ. ಶಿವಕುಮಾರ್‌

Published:
Updated:

ಬೆಂಗಳೂರು: ‘ಸಚಿವ ಪುಟ್ಟರಂಗಶೆಟ್ಟಿ ಚೆಕ್‌ನಲ್ಲಿ ಹಣ ಪಡೆದಿಲ್ವಲ್ಲ. ಚೆಕ್‌ಗಳಲ್ಲಿ ಬಿಜೆಪಿಯವರು ತೆಗೆದುಕೊಂಡಿಲ್ವ. ನಾನು ಎಲ್ಲ ಬಿಚ್ಚಿ ಇಡಬೇಕಾಗುತ್ತದೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

‘ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಕ್ಕೆ ಸೇರಿದವರು.‌ ಅದನ್ನು ಸಹಿಸಿಕೊಳ್ಳಲು ಕೆಲವರಿಗೆ ಆಗುವುದಿಲ್ಲ. ಕಾಂಗ್ರೆಸ್, ಜೆಡಿಎಸ್ ನಾಯಕರ ಮೇಲೆ ಬಿಜೆಪಿಯವರು ಆರೋಪ ಮಾಡಬೇಕು ಅಷ್ಟೆ. ಹಣಕ್ಕೂ ಪುಟ್ಟರಂಗಶೆಟ್ಟಿಗೂ ಯಾವುದೇ ಸಂಬಂಧ ಇಲ್ಲ’ ಎಂದರು.

‘ಯಾರೋ ಹಣ ತೆಗೆದುಕೊಂಡು ಹೋದರೆ ಅದಕ್ಕೂ ಪುಟ್ಟರಂಗಶೆಟ್ಟಿಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ. ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ. ಚೆಕ್‌ನಲ್ಲಿ ಹಣ ಪಡೆದವರ ಬಗ್ಗೆ ಆದಾಯ ಇಲಾಖೆಯವರು ಯಾಕೆ ತನಿಖೆ ಮಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಮೈಸೂರು ಕೆಆರ್‌ಎಸ್ ಬೃಂದಾವನವನ್ನು ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಗೆ ಯಾರ ಜಮೀನನ್ನೂ ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಈ ಯೋಜನೆ ಸಿದ್ದರಾಮಯ್ಯ ಅವರ ಆಡಳಿತದ ಅವಧಿಯಲ್ಲೇ ಸಿದ್ಧವಾಗಿತ್ತು’ ಎಂದು ಶಿವಕುಮಾರ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !