ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನೌಷಧ ಪೂರೈಕೆ ಜಾಲ ಬಲಪಡಿಸಲು ಕೇಂದ್ರ ಕ್ರಮ

ವಲಯಮಟ್ಟದ ದಾಸ್ತಾನು ಗೋದಾಮುಗಳ ನಿರ್ಮಾಣ
Last Updated 10 ಜೂನ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಜನೌಷಧಿ ಕೇಂದ್ರಗಳ ಔಷಧ ಸರಬರಾಜು ಜಾಲ ಬಲಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಅತ್ಯಂತ ಕಡಿಮೆ ದರದಲ್ಲಿ ಔಷಧ ಒದಗಿಸುತ್ತಿರುವ 3,600 ಜನೌಷಧಿ ಕೇಂದ್ರಗಳಿಗೆ ಸಕಾಲಕ್ಕೆ ಔಷಧ ಪೂರೈಸಲು ಸಂಪರ್ಕ ಕೊಂಡಿ ಬಲಪಡಿಸಲಾಗುತ್ತಿದೆ. ಇದಕ್ಕಾಗಿ ಪ್ರಾದೇಶಿಕ ಮಟ್ಟದಲ್ಲಿ ಔಷಧ ದಾಸ್ತಾನು ಗೋದಾಮುಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

‘ಸಕಾಲಕ್ಕೆ ಔಷಧ ಪೂರೈಸಲು ಅಗತ್ಯ ಮೂಲಸೌಕರ್ಯಗಳನ್ನು ಬಲಪಡಿಸಲಾಗುತ್ತಿದೆ. ಈಗಾಗಲೇ ಗುರುಗ್ರಾಮದಲ್ಲಿ ಔಷಧ ಗೋದಾಮು ಹೊಂದಿದ್ದೇವೆ. ಕೆಲವೇ ತಿಂಗಳಲ್ಲಿ ದೇಶದಾದ್ಯಂತ ಪ್ರಾದೇಶಿಕ ಮಟ್ಟದ ಐದು ಗೋದಾಮುಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ಔಷಧ ಇಲಾಖೆ ಜಂಟಿ ಕಾರ್ಯದರ್ಶಿ ನವದೀಪ್ ರಿನ್ವಾ ತಿಳಿಸಿದ್ದಾರೆ.

ಔಷಧ ಪೂರೈಕೆ ವಿಳಂಬ ತಪ್ಪಿಸಲು, ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಅಷ್ಟೇ ಅಲ್ಲದೆ, ಖಾಸಗಿ ಕಂಪನಿಗಳಿಂದಲೂ ಕೇಂದ್ರ ಸರ್ಕಾರ ಔಷಧಿ ಖರೀದಿಸಲು ಆರಂಭಿಸಿದೆ ಎಂದರು.

ಜನೌಷಧಿ ಕೆಂದ್ರಗಳಲ್ಲಿ ಪ್ರಸ್ತುತ ದಾಸ್ತಾನು ಮತ್ತು ಅಗತ್ಯ ಔಷಧ ಬೇಡಿಕೆ ತಿಳಿಯಲು ಅನುಕೂಲವಾಗುವಂತೆ, ಜನೌಷಧಿ ಕೇಂದ್ರಗಳು ಮತ್ತು ಔಷಧ ಗೋದಾಮುಗಳ ನಡುವಣ ಸಂಪರ್ಕಕ್ಕೆ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಪ್ರತಿ ಜನೌಷಧಿ ಕೇಂದ್ರಗಳಲ್ಲಿ ಆ ಸಮಯಕ್ಕೆ ಲಭ್ಯವಿರುವ ಔಷಧಿಗಳ ದಾಸ್ತಾನು ಪ್ರಮಾಣವನ್ನು ಸಾಫ್ಟ್‌ವೇರ್ ಮೂಲಕ ತಿಳಿದುಕೊಳ್ಳಲಾಗುತ್ತದೆ ಎಂದರು.

ಸಾಕಷ್ಟು ಪ್ರಮಾಣದಲ್ಲಿ ಔಷಧ ಮಾರಾಟ ಆಗುತ್ತಿರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 750ರಿಂದ 1,000 ಜನೌಷಧಿ ಕೇಂದ್ರಗಳನ್ನು ಆರಂಭಿಸಲೂ ಸರ್ಕಾರ ನಿರ್ಧರಿಸಿದೆ ಎಂದರು.

**

ಜನೌಷಧಿ ಕೇಂದ್ರಗಳಿಂದ ಯಾರೂ ತಮಗೆ ಬೇಕಾದ ಔಷಧ ಸಿಕ್ಕಿಲ್ಲವೆಂದು ಬರಿಗೈಯಲ್ಲಿ ವಾಪಸ್‌ ಹೋಗದಂತೆ ಮಾಡುವುದು ನಮ್ಮ ಆದ್ಯತೆ

– ನವದೀಪ್ ರಿನ್ವಾ, ಔಷಧ ಇಲಾಖೆ ಜಂಟಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT