ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಇ.ಡಿ. ಸಮನ್ಸ್‌ ರದ್ದತಿ ಕೋರಿ ಮೇಲ್ಮನವಿ ಸಲ್ಲಿಸಿದ ಡಿ.ಕೆ.ಶಿವಕುಮಾರ್‌

Published:
Updated:

ಬೆಂಗಳೂರು: ಜಾರಿ ನಿರ್ದೇಶನಾಲಯ (ಇ.ಡಿ) ಜಾರಿಗೊಳಿಸಿದ್ದ ಸಮನ್ಸ್ ರದ್ದು ಕೋರಿ ಶಾಸಕ ಡಿ.ಕೆ. ಶಿವಕುಮಾರ್‌  ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಶಿವಕುಮಾರ್ ಪರ ವಕೀಲರು ಸೋಮವಾರ ಮೇಲ್ಮನವಿ ಸಲ್ಲಿಸಿದರು.‌

ಇದನ್ನೂ ಓದಿ: ದೇಶದ ಕಾನೂನಿಗಿಂತಲೂ ದ್ವೇಷದ ರಾಜಕಾರಣವೇ ಬಲಿಷ್ಠ: ಡಿಕೆಶಿ

ತುರ್ತು ವಿಚಾರಣೆ ನಡೆಸುವಂತೆ ನ್ಯಾಯಪೀಠಕ್ಕೆ ವಕೀಲರು ಮನವಿ ಮಾಡಿದರು. ಇದೇ 11ಕ್ಕೆ ವಿಚಾರಣೆ ನಡೆಸುವುದಾಗಿ ವಿಭಾಗೀಯ ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ: ‘ಕನಕಪುರದ ಬಂಡೆ’ ಡಿ.ಕೆ.ಶಿವಕುಮಾರ್‌ಗೆ ಈಗ ಸಂಕಷ್ಟದ ಕಾಲ!

‘ಆದಾಯ ತೆರಿಗೆ ಇಲಾಖೆ, ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಇದರನ್ವಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಸಿಐಆರ್ (ಪೊಲೀಸ್ ಎಫ್‌ಐಆರ್‌ಗೆ ಸಮಾನವಾದ–ಜಾರಿ ಪ್ರಕರಣ ಮಾಹಿತಿ ವರದಿ) ದಾಖಲಿಸಿದ್ದಾರೆ. ಹೀಗಾಗಿ, ಈ ಹಂತದಲ್ಲಿ ಆರೋಪಿಗಳ ಅರ್ಜಿಗಳು ವಿಚಾರಣೆಗೆ ಅರ್ಹವಾಗಿಲ್ಲ’ ಎಂದು ಏಕಸದಸ್ಯ ಪೀಠ ತೀರ್ಪಿನಲ್ಲಿ ತಿಳಿಸಿತ್ತು.

ನವದೆಹಲಿ ವರದಿ: ಬಂಧಿತ‌ ಡಿ.ಕೆ. ಶಿವಕುಮಾರ್ ಕುಟುಂಬ ಸದಸ್ಯರ ಭೇಟಿ ವೇಳೆ ತನಿಖಾಧಿಕಾರಿ ಇರಕೂಡದು ಎಂಬ ಮನವಿಯನ್ನು ದೆಹಲಿ ಜಾರಿ ನಿರ್ದೇಶನಾಲಯ (ಇ.ಡಿ.) ವಕೀಲರು ವಿಶೇಷ ನ್ಯಾಯಾಲಯದ ಎದುರು ಸಲ್ಲಿಸಿದ್ದಾರೆ.

ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಅವರ ಪೀಠದೆದುರು ಸೋಮವಾರ ಮಧ್ಯಾಹ್ನ ನಡೆದ ವಿಚಾರಣೆ ವೇಳೆ ಈ ಮನವಿ ಸಲ್ಲಿಸಲಾಗಿದೆ.

ಶಿವಕುಮಾರ್‌ ಸ್ವಯಂ ಮುಖ ಕ್ಷೌರಕ್ಕೆ ನೀಡುವಂತೆ, ವಿಚಾರಣೆಯ ವೇಳೆ ಪೆನ್‌, ಪೇಪರ್‌ ಬಳಕೆಗೂ ಅವಕಾಶ‌ ಕೋರಿ ಕೋರ್ಟ್ ಎದುರು ಶಿವಕುಮಾರ್ ಪರ ವಕೀಲ ಮಯಾಂಕ್ ಜೈನ್ ವಾದ ಮಂಡಿಸಿದ್ದಾರೆ. ಈ‌ ಬಗ್ಗೆ ಕೋರ್ಟ್ ಇನ್ನಷ್ಟೇ ಆದೇಶ ಹೊರಡಿಸಬೇಕಿದೆ.

Post Comments (+)