ಐ.ಟಿಗೆ ಪತ್ರ: ಅಸಲಿ–ನಕಲಿ ಸಮರ

7

ಐ.ಟಿಗೆ ಪತ್ರ: ಅಸಲಿ–ನಕಲಿ ಸಮರ

Published:
Updated:

ಬೆಂಗಳೂರು: ಬಿಜೆಪಿ ನಾಯಕರು ಆದಾಯ ತೆರಿಗೆ(ಐ.ಟಿ) ಇಲಾಖೆ, ಸಿಬಿಐಯಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ವಿಷಯ ಕಾಂಗ್ರೆಸ್‌–ಬಿಜೆಪಿ ನಾಯಕರ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.

‘ಬಿಜೆಪಿ ನಾಯಕರು ಐ.ಟಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ನನ್ನ ಬಳಿ ಸಾಕ್ಷ್ಯಗಳು ಇವೆ. ನನ್ನ ಅಣ್ಣ, ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಐ.ಟಿ ಇಲಾಖೆ ಮುಖ್ಯಸ್ಥರಿಗೆ  2017ರ ಜನವರಿಯಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು ಪತ್ರ ಬರೆದಿದ್ದರು’ ಎಂದು ಹೇಳಿದ ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌, ಪತ್ರದ ಪ‍್ರತಿಯನ್ನು ಪ್ರದರ್ಶಿಸಿದರು.

‘ನನ್ನ ಬಳಿ ಇನ್ನಷ್ಟು ದಾಖಲೆಗಳಿವೆ. ಸಮಯ ಬಂದಾಗ ಅವೆಲ್ಲವನ್ನೂ ಬಿಡು ಗಡೆ ಮಾಡುವೆ’ ಎಂದರು.

ಈ ಆರೋಪಕ್ಕೆ ತಿರುಗೇಟು ನೀಡಿದ ಯಡಿಯೂರಪ್ಪ,  ‘ಸುರೇಶ್‌ ಬಿಡುಗಡೆ ಮಾಡಿರುವ ಪತ್ರ ನಕಲಿ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ’ ಎಂದರು.

‘ಅಪವಿತ್ರ ಸರ್ಕಾರವನ್ನು ಉಳಿಸಲು ಕಾಂಗ್ರೆಸ್‌ ಹತಾಶೆಯಿಂದ ಈ ರೀತಿ ಮಾಡಿದೆ. ನಾನು ಇಂತಹ ಕೀಳುಮಟ್ಟದ ರಾಜಕಾರಣ ಮಾಡುವುದಿಲ್ಲ. ಆರೋಪ ಸಾಬೀತು ಪಡಿಸಿದರೆ ನಾನು ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ’ ಎಂದು ಸವಾಲು ಹಾಕಿದರು.

‘ನಾನು ಯಾವುದೇ ಕಾರಣಕ್ಕೂ ಐ.ಟಿ, ಇ.ಡಿಯನ್ನು ದುರ್ಬಳಕೆ ಮಾಡಿಲ್ಲ. ನಾನು ಮತ್ತು ಶಿವಕುಮಾರ್ ಬೇರೆ ಬೇರೆ ಪಕ್ಷದಲ್ಲಿದ್ದರೂ ಉತ್ತಮ ಸಂಬಂಧ ಹೊಂದಿದ್ದೇವೆ. ಈ ಬಗ್ಗೆ, ಸುರೇಶ್ ತನ್ನ ಅಣ್ಣನನ್ನೇ ಕೇಳಿ ತಿಳಿದುಕೊಳ್ಳಲಿ’ ಎಂದರು.

ಈ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಸುರೇಶ್, ‘ನನ್ನ ಆರೋಪ ಸುಳ್ಳಾಗಿದ್ದರೆ ತನಿಖೆಗೆ ಆದೇಶಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಿ’ ಎಂದು ಸವಾಲು ಒಡ್ಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !