ಶನಿವಾರ, ನವೆಂಬರ್ 16, 2019
24 °C

ಡಿಕೆಶಿ ಆಪ್ತ ಸಚಿನ್‌ ನಾರಾಯಣ್‌ಗೂ ‘ಸುಪ್ರೀಂ’ ಅಭಯ

Published:
Updated:

ನವದೆಹಲಿ: ಡಿ.ಕೆ.ಶಿವಕುಮಾರ್‌ ಅವರ ಆಪ್ತ ಸಚಿನ್‌ ನಾರಾಯಣ್‌ ಅವರನ್ನು ಬಂಧಿಸಕೂಡದು ಎಂದು ಇ.ಡಿ.ಗೆ ಸೂಚಿಸಿ ಸುಪ್ರೀಂ ಕೋರ್ಟ್‌ ಗುರುವಾರ ಮಧ್ಯಂತರ ಆದೇಶ ನೀಡಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗಾಗಿ ಇ.ಡಿ. ಸಮನ್ಸ್ ರದ್ದತಿ ಕೋರಿ ಇವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌.ಎಫ್‌. ನರಿಮನ್ ನೇತೃತ್ವದ ಪೀಠ, ಇವರನ್ನು ಬಲವಂತದಿಂದ ಬಂಧಿಸಕೂಡದು ಎಂದು ತಿಳಿಸಿದೆ.

ಶಿವಕುಮಾರ್‌ ಅವರ ಇತರ ಆಪ್ತರಾದ ಆಂಜನೇಯ ಹನುಮಂತಪ್ಪ ಹಾಗೂ ಎನ್‌.ರಾಜೇಂದ್ರ ಅವರನ್ನೂ ಬಂಧಿಸದಂತೆ ಪೀಠ ಕಳೆದ ಮಂಗಳವಾರ ಆದೇಶಿಸಿತ್ತು.

ಪ್ರತಿಕ್ರಿಯಿಸಿ (+)