ಶನಿವಾರ, ಡಿಸೆಂಬರ್ 14, 2019
25 °C

ಐ.ಟಿ ವಿಚಾರಣೆಗೆ ಹಾಜರಾದ ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2016–17ನೇ ಸಾಲಿನ ಆಸ್ತಿ ತೆರಿಗೆ ವಂಚನೆ ಪ್ರಕರಣದ ಸಂಬಂಧ ಕಾಂಗ್ರೆಸ್‌ ಮುಖಂಡ ಡಿ.ಕೆ. ಶಿವಕುಮಾರ್‌ ಸೋಮವಾರ ಇಲ್ಲಿನ ಕ್ವೀನ್ಸ್‌ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆಯ ಕೇಂದ್ರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು.

ಸಂಜೆ 4ರ ಸುಮಾರಿಗೆ ಐಟಿ ಕಚೇರಿಗೆ ಬಂದ, ಶಿವಕುಮಾರ್‌, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಕೆಲವು ದಾಖಲೆಗಳನ್ನು ಸಲ್ಲಿಸಿದರು.

ಬೆಳಿಗ್ಗೆ 10.30ಕ್ಕೆ ಖುದ್ದಾಗಿ ಅಥವಾ ನಿಮ್ಮ ಅಧಿಕೃತ ಪ್ರತಿನಿಧಿ ಮೂಲಕ ಹಾಜರಾಗಿ, ನಿಮ್ಮ ಮೇಲೆ ದಂಡ ಏಕೆ ವಿಧಿಸಬಾರದು ಎಂಬುದಕ್ಕೆ ಸಮಜಾಯಿಷಿ ನೀಡಬೇಕು. ಅಕಸ್ಮಾತ್‌ ನಿಮಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ ನಿಗದಿತ ದಿನದೊಳಗಾಗಿ ಲಿಖಿತ ಆಕ್ಷೇಪ ಸಲ್ಲಿಸಬಹುದು ಎಂದೂ 29ರಂದು ಜಾರಿ ಮಾಡಿದ್ದ ನೋಟಿಸ್‌ನಲ್ಲಿ ಹೇಳಲಾಗಿತ್ತು.

ತಾಯಿ, ಪತ್ನಿಗೂ ನೋಟಿಸ್‌: ಆದಾಯ ತೆರಿಗೆ ವಂಚನೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಶಿವಕುಮಾರ್‌ ಅವರ ತಾಯಿ ಗೌರ‌ಮ್ಮ ಮತ್ತು ಪತ್ನಿ ಉಷಾ ಅವರಿಗೂ ಆದಾಯ ತೆರಿಗೆ ಇಲಾಖೆ ನೋಟಿಸ್‌ ನೀಡಿದೆ. ಈ ತಿಂಗಳ ನಾಲ್ಕು ಮತ್ತು ಐದರಂದು ವಿಚಾರಣೆಗೆ ಬರುವಂತೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು