‘ಬಿಗ್ ಪೀಪಲ್, ಬಿಗ್ ಟಾಕ್’: ಡಿ.ಕೆ.ಶಿವಕುಮಾರ್‌ ವ್ಯಂಗ್ಯ

7

‘ಬಿಗ್ ಪೀಪಲ್, ಬಿಗ್ ಟಾಕ್’: ಡಿ.ಕೆ.ಶಿವಕುಮಾರ್‌ ವ್ಯಂಗ್ಯ

Published:
Updated:

ಬೆಂಗಳೂರು: ‘ಬಿಗ್ ಪೀಪಲ್, ಬಿಗ್ ಟಾಕ್ ಅವರಿಗೆ ಒಳ್ಳೆಯದಾಗಲಿ. ಯಾರು ಏನು ಬೇಕಾದರೂ ಮಾತನಾಡಲಿ. ನಾನು ಎಲ್ಲವನ್ನೂ ಪ್ರಸಾದವೆಂದು ಸ್ವೀಕರಿಸುತ್ತೇನೆ’ ಎಂದು ಜಲಸಂಪನ್ಮೂಲ ಸಚಿವ ಡಿ. ಕೆ ಶಿವಕುಮಾರ್ ಹೇಳಿದರು.

‘ಮೈತ್ರಿ ಸರ್ಕಾರ ‌ನನ್ನನ್ನು ಟಾರ್ಗೆಟ್ ಮಾಡುತ್ತಿದೆ’ ಎಂಬ ಗಾಲಿ ಜನಾರ್ದನ ರೆಡ್ಡಿ ಹೇಳಿಕೆ ವಿಚಾರಕ್ಕೆ ಅವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

ಆ್ಯಂಬಿಡೆಂಟ್ ಕಂಪನಿಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ದಿನ ಬೆಳಗಾದರೆ ದಿನಪತ್ರಿಕೆಯ ಹೆಡ್ ಲೈನ್ ಮಾತ್ರ ನೋಡುತ್ತೇನೆ. ಪೂರ್ತಿ ವಿವರ ಓದಲು ಸಮಯವಿಲ್ಲ. ಸದ್ಯಕ್ಕೆ ನನಗೆ ಇರುವ ಕೆಲಸ ಮಾಡಿದರೆ ಸಾಕಾಗಿದೆ ಎಂದರು.

ಈ ಬಗ್ಗೆ ಮಾತನಾಡಲು ನಾನು ಗೃಹ ಸಚಿವನೂ ಅಲ್ಲ. ಪೊಲೀಸ್ ಆಯುಕ್ತರೂ ಅಲ್ಲ ಎಂದರು.

ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆ: ಕೇಂದ್ರ ಸರ್ಕಾರದ ಜೊತೆ ಒಪ್ಪಂದ
ಬೆಂಗಳೂರು: ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆ ಸಂಬಂದಿಸಿದಂತೆ ಅ.30ರಂದು ಕೇಂದ್ರ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ' ಎಂದು ಉನ್ನತ ವೈದ್ಯಕೀಯ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಯೋಜನೆಯಡಿ ಎರಡು ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಕಳೆದ ಹತ್ತನ್ನೊಂದು ದಿನಗಳ ಅವಧಿಯಲ್ಲಿ ಮಾಡಿದ್ದೇವೆ. ಎಲ್ಲ ಬಿಪಿಎಲ್ ಕಾರ್ಡ್‌ದಾರರು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ ಎಂದರು.

ಕಾರ್ಡ್‌ ಇಲ್ಲದಿದ್ದರೂ ಚಿಕಿತ್ಸೆ ಪಡೆಯಬಹುದು. ಬೆಂಗಳೂರು ಒನ್ ಕೇಂದ್ರಕ್ಕೆ ತೆರಳಿ ಹೆಸರು ನೋಂದಾಯಿಸಿ 30 ರೂಪಾಯಿಗೆ ಈ ಕಾರ್ಡ್‌ ದೊರೆಯುತ್ತದೆ ಎಂದರು.

ಯೋಜನೆಯಡಿ ಐದು ಲಕ್ಷದವರೆಗೆ ಚಿಕಿತ್ಸೆ ವೆಚ್ಚ ಭರಿಸಲು ಸರ್ಕಾರ ಸಿದ್ಧವಿದೆ. ಬಿಪಿಎಲ್ ಕಾರ್ಡ್ ಇಲ್ಲದವರಿಗೂ ಒಂದೂವರೆ ಲಕ್ಷದವರೆಗೆ ವೆಚ್ಚ ಭರಿಸಲಾಗುವುದು. ಯೋಜನೆಗೆ ಕೇಂದ್ರದಿಂದ ಶೇಕಡಾ ಅರವತ್ತರಷ್ಟು ಹಾಗೂ ರಾಜ್ಯ ಸರ್ಕಾರ ನಲವತ್ತರಷ್ಟು ವೆಚ್ಚ ಭರಿಸಲಿವೆ ಎಂದರು.

ಲೋಕಸಭಾ ಚುನಾವಣೆ: ನ.16ರಿಂದ 'ಕೈ' ತಯಾರಿ
ಬೆಂಗಳೂರು: 2019ರ ಲೋಕಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಈಗಿನಿಂದಲೇ ಅಣಿಯಾಗಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೂರು ದಿನಗಳ ಸರಣಿ ಸಭೆ ಕರೆದಿದ್ದಾರೆ.

ನ. 16, 17 ಹಾಗೂ 20ರಂದು ಡಿಸಿಸಿ ಅಧ್ಯಕ್ಷರು, ಕೆಪಿಸಿಸಿ ಮುಂಚೂಣಿ ಘಟಕದ ನಾಯಕರ ಸಭೆ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿದೆ.

16ರಂದು ಮೈಸೂರು ವಿಭಾಗದ ಜಿಲ್ಲೆಯ ಮುಖಂಡರ ಜೊತೆ ಸಭೆ, 17ರಂದು ಬೆಂಗಳೂರು, ಬೆಳಗಾವಿ ಮುಖಂಡರ ಜೊತೆ ಚರ್ಚೆ ನಡೆಯಲಿದೆ. 20ರಂದು ಕಲಬುರ್ಗಿ ಜಿಲ್ಲೆಯ ಮುಖಂಡರ ಜೊತೆ ದಿನೇಶ್ ಗುಂಡೂರಾವ್ ಸಭೆ ನಡೆಸಲಿದ್ದಾರೆ.

ಸಿದ್ದರಾಮಯ್ಯ, ಈಶ್ವರ ಖಂಡ್ರೆ ಸೇರಿದಂತೆ ಹಲವು ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 10

  Happy
 • 3

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !