ಸೋಮವಾರ, ಸೆಪ್ಟೆಂಬರ್ 16, 2019
27 °C

ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ರಾತ್ರಿ ಕಳೆದ ಡಿಕೆಶಿ

Published:
Updated:

ನವದೆಹಲಿ: ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿಯೇ ಮಂಗಳವಾರ ರಾತ್ರಿಯನ್ನು ಕಳೆದರು.

ರಾಮ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮುಗಿದ ನಂತರ ಶಿವಕುಮಾರ್ ಅವರನ್ನು ನಿರ್ದೇಶನಾಲಯದ ಅಧಿಕಾರಿಗಳು ಕಚೇರಿಗೆ ಕರೆದೊಯ್ದರು.

ದೆಹಲಿಗೆ ಧಾವಿಸಿದ್ದ ಶಿವಕುಮಾರ್ ಬೆಂಬಲಿಗರು ಆಸ್ಪತ್ರೆಗೆ ಭೇಟಿ ನೀಡಿ, ನಾಯಕನ ಸ್ಥಿತಿ ಕಂಡು ಮರುಕಪಟ್ಟರು. ಓರ್ವ ಅಭಿಮಾನಿ ತನ್ನ ಅಂಗಿ ಹರಿದುಕೊಂಡು ಜೋರಾಗಿ ಅಳುತ್ತಾ ರಸ್ತೆಯ ಮೇಲೆ ಉರುಳಾಡಿದ.

ತಿಲಕ್ ಮಾರ್ಗ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲು ಕೆಲ ಬೆಂಬಲಿಗರು ಮುಂದಾದರು. ಆದರೆ ಪೊಲೀಸರ ಅವರನ್ನು ಚದುರಿಸಿದರು. ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಭೇಟಿ ನೀಡಿದ್ದರು.

Post Comments (+)