ಶುಕ್ರವಾರ, ಅಕ್ಟೋಬರ್ 18, 2019
27 °C

ಇ.ಡಿ. ವಿಚಾರಣೆಗೆ ಹಾಜರಾದ ಡಿ.ಕೆ.ಸುರೇಶ್

Published:
Updated:

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೆ ಒಳಗಾಗಿರುವ ಡಿ.ಕೆ.‌ಶಿವಕುಮಾರ್‌ ಅವರ ಸೋದರ, ಸಂಸದ‌ ಡಿ.ಕೆ. ಸುರೇಶ್ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (ಇ.ಡಿ.‌) ಕಚೇರಿಗೆ ಹಾಜರು.

ಬೆಳಿಗ್ಗೆ 11ಕ್ಕೆ ಕೆಲವು ದಾಖಲೆಗಳೊಂದಿಗೆ ಇಲ್ಲಿನ ಖಾನ್ ಮಾರ್ಕೆಟ್ ಬಳಿ ಇರುವ ಲೋಕನಾಯಕ‌ ಭವನದಲ್ಲಿರುವ  ಇ.ಡಿ. ಪ್ರಧಾನ ಕಚೇರಿಯೊಳಗೆ ತೆರಳಿದ ಸುರೇಶ್.

ಒಟ್ಟು 27 ಆಸ್ತಿ ಹೊಂದಿರುವ ಸುರೇಶ್‌‌ ಸಹ ನಗದು ನೀಡಿಯೇ ಆಸ್ತಿ ಖರೀದಿಸಿದ್ದಾಗಿ ಶಿವಕುಮಾರ್ ಪ್ರಕರಣದಲ್ಲಿ ಇ.ಡಿ. ವಕೀಲರು ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದರು.

ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ವಿಚಾರಣೆಗೆ ತೆರಳುವ ಮುನ್ನ ಸುದ್ದಿಗಾರರಿಗೇ ಹೇಳಿದ ಸುರೇಶ್.

Post Comments (+)