‘ಇಡಿ’ಯಿಂದ ನೋಟಿಸ್‌ ಬಂದಿಲ್ಲ–ಕಾನೂನಿನ ಹೋರಾಟಕ್ಕೆ ಹೆದರಲ್ಲ: ಡಿ.ಕೆ.ಸುರೇಶ್

7

‘ಇಡಿ’ಯಿಂದ ನೋಟಿಸ್‌ ಬಂದಿಲ್ಲ–ಕಾನೂನಿನ ಹೋರಾಟಕ್ಕೆ ಹೆದರಲ್ಲ: ಡಿ.ಕೆ.ಸುರೇಶ್

Published:
Updated:

ಬೆಂಗಳೂರು: ‘ಸಿಬಿಐ, ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ನಮ್ಮನ್ನು ಬಂಧಿಸಲು ಮುಂದಾದರೂ ಹೆದರುವುದಿಲ್ಲ. ಕಾನೂನು ಹೋರಾಟ ಹೇಗೆ ನಡೆಸಬೇಕು ಎನ್ನುವುದು ನಮಗೆ ಗೊತ್ತಿದೆ’ ಎಂದು ಸಂಸದ ಡಿ.ಕೆ. ಸುರೇಶ್ ಸವಾಲು ಹಾಕಿದರು.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ’ಒಂದೂವರೆ ವರ್ಷದ ಹಿಂದೆ ನನ್ನ ಕಚೇರಿ, ಡಿ.ಕೆ. ಶಿವಕುಮಾರ್‌ ಮನೆ, ಕಚೇರಿ ಹಾಗೂ ನಮ್ಮ ಸ್ನೇಹಿತರ ಮನೆ, ಕಚೇರಿಗಳು ಸೇರಿ 80 ಕಡೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಏನೂ ಆಗುವುದಿಲ್ಲ ಎಂದು ಗೊತ್ತಾದ ಮೇಲೆ ಹಿಂಬಾಗಿಲ ಮೂಲಕ ಶಿವಕುಮಾರ್‌ ಮೇಲೆ ಒತ್ತಡ ಹೇರಿ, ಬಿಜೆಪಿ ನಾಯಕರು ಲೋಕಸಭೆ ಚುನಾವಣೆಯಲ್ಲಿ ‘ಮಿಷನ್‌–25’ಕ್ಕೆ ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

‘ಐ.ಟಿ ಅಧಿಕಾರಿಗಳು ನಾಲ್ಕು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾವು ಕಾನೂನು ಉಲ್ಲಂಘಿಸಿ ಯಾವುದೇ ವ್ಯವಹಾರ ಮಾಡಿಲ್ಲ. ಇ.ಡಿ ಈವರೆಗೂ ನಮಗೆ ಯಾವುದೇ ನೋಟಿಸ್‌ ನೀಡಿಲ್ಲ’ ಎಂದರು.

‘ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ಬಿಜೆಪಿ ನಾಯಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಸಂಸ್ಥೆಗಳು ಸಿಬಿಐ ಮೋರ್ಚಾ, ಇ.ಡಿ ಮೋರ್ಚಾ, ಐ.ಟಿ ಮೋರ್ಚಾಗಳಾಗಿವೆ’ ಎಂದು ವ್ಯಂಗ್ಯವಾಗಿ ಹೇಳಿದರು.

‘ಸಮ್ಮಿಶ್ರ ಸರ್ಕಾರವನ್ನು ಕೆಡವಲು ಆಪರೇಷನ್ ಕಮಲಕ್ಕೆ ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ. ಏಳು ಶಾಸಕರಿಗೆ ಗಾಳ ಹಾಕಿರುವ ಕಮಲ ಪಕ್ಷದ ನಾಯಕರು, ನಮಗೂ ಆಮಿಷ ಒಡ್ಡುತ್ತಿದ್ದಾರೆ’ ಎಂದು ಆರೋಪಿಸಿದರು.

ಪ್ರಧಾನಿ ಭೇಟಿ: ‘ಇನ್ನೊಂದು ವಾರದಲ್ಲಿ ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ನಾವು ಅದಕ್ಕೆ ಹೆದರುವುದಿಲ್ಲ. ನ್ಯಾಯಾಲಯದ ಮೊರೆ ಹೋಗುತ್ತೇವೆ. ಬಿಜೆಪಿ ನಾಯಕರ ಕುತಂತ್ರದ ಕುರಿತು ತಿಳಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಅವಕಾಶ ಕೇಳಿದ್ದೇನೆ’ ಎಂದರು.

ಆದಾಯ ತೆರಿಗೆಗೆ ಪತ್ರ:  ‘ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನವನ್ನು ಇಲ್ಲಿನ ಬಿಜೆಪಿ ನಾಯಕರು ಮಾಡುತ್ತಿದ್ದಾರೆ’ ಎಂದು ಆರೋಪಿಸಿದ ಅವರು, 2017ರ ಜನವರಿಯಲ್ಲಿ ಆದಾಯ ತೆರಿಗೆ ಇಲಾಖೆಯ ಮುಖ್ಯಸ್ಥರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬರೆದ ಪತ್ರವನ್ನು ಪ್ರದರ್ಶಿಸಿದರು.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !