ಮಂಗಳವಾರ, ನವೆಂಬರ್ 19, 2019
23 °C

ವೈದ್ಯರ ಪ್ರತಿಭಟನೆ ಅಂತ್ಯ

Published:
Updated:

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಶರಣಾಗಿರುವ ಬೆನ್ನಲ್ಲೇ ಮಿಂಟೊ ಆಸ್ಪತ್ರೆಯ ಕಿರಿಯ ವೈದರು ತಮ್ಮ ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ‌.
ಕಿರಿಯ ವೈದ್ಯ ಸಂಘದ ಅಧ್ಯಕ್ಷ ಎಲ್.ಎನ್ ರೆಡ್ಡಿ ಅವರು ಈ ಹೇಳಿಕೆ ನೀಡಿದ್ದಾರೆ. 'ಇವತ್ತಿಗೆ ಈ ಕ್ಷಣದಲ್ಲಿ ಹಿಂಪಡೆದಿದ್ದೇವೆ. ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ನಮಗೆ ಭದ್ರತೆಯನ್ನು ಕೊಡುತ್ತೇವೆ ಎಂದು ಸರ್ಕಾರದಿಂದಲೂ ಭರವಸೆ ಬಂದಿದೆ' ಎಂದಿದ್ದಾರೆ. 'ಈ‌ ಹಿನ್ನಲೆ ನಾವು ಮುಷ್ಕರ ವಾಪಸ್ಸು ಪಡೆಯುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)