ಭಾನುವಾರ, ನವೆಂಬರ್ 17, 2019
23 °C

ಕರವೇ ಕಾರ್ಯಕರ್ತರಿಗೆ ಜಾಮೀನು 

Published:
Updated:

ಬೆಂಗಳೂರು: ವಿ.ವಿ.ಪುರ ಠಾಣೆ ಪೊಲೀಸರ ಎದುರು ಶರಣಾದ ಕರವೇ ಕಾರ್ಯಕರ್ತರನ್ನು 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಶುಕ್ರವಾರ ಮಧ್ಯಾಹ್ನವೇ ಹಾಜರುಪಡಿಸಲಾಯಿತು. ಜಾಮೀನು ಕೋರಿ ಕಾರ್ಯಕರ್ತರ ಪರ ವಕೀಲರೂ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ, ₹50 ಸಾವಿರ ಮೊತ್ತದ ಬಾಂಡ್ ಹಾಗೂ ₹3,000 ನಗದು ಶ್ಯೂರಿಟಿ ನೀಡಬೇಕೆಂಬ ಷರತ್ತುಗಳನ್ನು ವಿಧಿಸಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತು.  

ಪ್ರತಿಕ್ರಿಯಿಸಿ (+)