ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧರ್ಮದ ವಿಷಯದಲ್ಲಿ ರಾಜಕೀಯ ಬೇಡ’

ಮಂತ್ರಾಲಯದ ಸುಬುದೇಂದ್ರತೀರ್ಥ ಶ್ರೀ ಸಲಹೆ
Last Updated 3 ಮೇ 2019, 20:24 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಹಿಂದೂ ಸಂಸ್ಕೃತಿಯ ನೆಲೆಯಲ್ಲಿ ಸ್ಥಾಪಿತಗೊಂಡಿರುವ ಧರ್ಮದ ವಿಷಯದಲ್ಲಿ ವ್ಯಕ್ತಿಗಳು, ಸರ್ಕಾರ ಸ್ವಪ್ರತಿಷ್ಠೆಗಾಗಿ ಹಸ್ತಕ್ಷೇಪ ಮಾಡಿ ನೋವು ಅನುಭವಿಸಿದ್ದನ್ನು ನೋಡಿದ್ದೇವೆ. ಅಂತಹ ದುಷ್ಕೃತ್ಯಗಳಿಗೆ ಮುಂದಾಗುವುದು ಸಲ್ಲ’ ಎಂದು ಮಂತ್ರಾಲಯದ ಸುಬುಧೇಂದ್ರತೀರ್ಥ ಶ್ರೀ ಹೇಳಿದರು.

ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇತ್ತೀಚಿನ ದಿನಗಳಲ್ಲಿ ಧರ್ಮ, ಧರ್ಮಗಳ ಮಧ್ಯೆ ಸಂಘರ್ಷ ಹುಟ್ಟಿಸಿ ವ್ಯಕ್ತಿ, ಪಕ್ಷ, ಸರ್ಕಾರ ಮಧ್ಯಸ್ಥಿಕೆ ವಹಿಸುತ್ತಿರುವುದು ಕಳವಳಕಾರಿ ಸಂಗತಿ. ಪವಿತ್ರ ಸಂದೇಶ ನೀಡುವ ಧರ್ಮದಲ್ಲಿ ರಾಜಕೀಯ ಬೆರೆಸಬೇಡಿ. ಕಲುಷಿತಗೊಂಡಿರುವ ರಾಜಕೀಯದಲ್ಲಿಧರ್ಮ ಬಳಕೆ ಮಾಡಿ ಶುಚಿತ್ವಕ್ಕೆ ಮುಂದಾದರೆ ದೇಶದ ಭವಿಷ್ಯಕ್ಕೆ ಸಹಕಾರಿ ಆಗಲಿದೆ’ ಎಂದು
ಸಲಹೆ ನೀಡಿದರು.

‘ದೇಶದ ಗಡಿಭಾಗ ಮತ್ತು ದೇಶದ ಆಂತರಿಕ ವಲಯದಲ್ಲಿ ಭಯೋತ್ಪಾದನೆಯಂತ ಸಮಾಜ ವಿರೋಧಿ ವಿಧ್ವಂಸಕ ಕೃತ್ಯಗಳಿಂದ ನಾಗರಿಕರು ಭಯಭೀತರಾಗಿದ್ದಾರೆ. ದೇಶದ ಭದ್ರತೆ, ಭಯೋತ್ಪಾದನೆ, ಅಭಿವೃದ್ಧಿಯ ವಿಷಯಗಳಿಗೆ ಆದ್ಯತೆ ನೀಡದ ರಾಜಕೀಯ ಪಕ್ಷಗಳು ವೈಯಕ್ತಿಕ ತೆಜೋವಧೆ, ಆರೋಪ, ಪ್ರತ್ಯಾರೋಪಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಗೆ ಕೆಟ್ಟ ಹೆಸರು ತಂದಿವೆ’ ಎಂದು ಅಸಮಾಧಾನವ್ಯಕ್ತಪಡಿಸಿದರು.

‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ನಡೆಸುವುದು ಸುಭದ್ರ ಸರ್ಕಾರ ತರುವ ಉದ್ದೇಶದಿಂದ. ಅಂತಹ ಭದ್ರ ಸರ್ಕಾರ ನೀಡು
ವಂತಹ ಕಾರ್ಯ ಯೋಜನೆಗಳನ್ನು ಜನರ ಮುಂದಿಟ್ಟು ಮತ ಕೇಳಬೇಕಾದ ರಾಜಕೀಯ ಪಕ್ಷಗಳು ಸಾಮಾಜಿಕ ಕ್ಷೇತ್ರದಲ್ಲಿ ಸಂಪೂರ್ಣ ವಿಫಲವಾಗಿವೆ. ಮತದಾರರಲ್ಲಿ ಜಾತಿ, ಧರ್ಮಗಳ ವಿಷಬೀಜ ಬೆರೆಸಿ ದೇಶದ ಐಕ್ಯತೆಗೆ ಧಕ್ಕೆ ತರುವಂತ ಕೃತ್ಯಗಳಿಗೆ ಕಡಿವಾಣ ಹಾಕಲು ಜನತೆ ಮುಂದಾಗಬೇಕು’ ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT