ಮಂಗಳವಾರ, ನವೆಂಬರ್ 19, 2019
23 °C

ವೈಯಕ್ತಿಕ ವಿಚಾರಗಳಿಗೆ ದೇವರನ್ನು ಎಳೆದು ತರಬೇಡಿ: ಕೆ.ಎಸ್‌.ಈಶ್ವರಪ್ಪ

Published:
Updated:

ಬೆಂಗಳೂರು: ವೈಯಕ್ತಿಕ ವಿಚಾರಗಳಿಗೆ ದೇವರನ್ನು ಎಳೆದು ತರುವುದು ಸರಿಯಲ್ಲ. ರಾಜಕೀಯ ಮೇಲಾಟಕ್ಕೆ ಆಣೆ, ಪ್ರಮಾಣ ಮಾಡುವುದು ಸರಿಯಲ್ಲ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಗುರುವಾರ ಅಭಿಪ್ರಾಯಪಟ್ಟರು.

ರಾಜಕಾರಣಿಗಳು ವೈಯಕ್ತಿಕ ಟೀಕೆ– ಟಿಪ್ಪಣಿ ಮಾಡಿಕೊಳ್ಳಲಿ. ಆರೋಪಗಳಿಗೆ ಪ್ರತ್ಯಾರೋಪ ಮಾಡಲಿ. ಅದರಿಂದ ಸಮಸ್ಯೆ ಇಲ್ಲ. ಆದರೆ, ರಾಜಕೀಯ ಕೆಸರೆರಚಾಟಕ್ಕೆ ದೇವರನ್ನು ಮುಂದು ಮಾಡಬಾರದು ಎಂದು ವಿಧಾನಸೌಧ ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದರು.

 

ಪ್ರತಿಕ್ರಿಯಿಸಿ (+)