ಜನ ಕಳ್ಳರಿಗೆ ಮತ ಹಾಕುವುದನ್ನು ಬಿಡುವವರೆಗೂ ದೇಶ ಉದ್ಧಾರ ಆಗಲ್ಲ: ಹೈಕೋರ್ಟ್

7

ಜನ ಕಳ್ಳರಿಗೆ ಮತ ಹಾಕುವುದನ್ನು ಬಿಡುವವರೆಗೂ ದೇಶ ಉದ್ಧಾರ ಆಗಲ್ಲ: ಹೈಕೋರ್ಟ್

Published:
Updated:

ಬೆಂಗಳೂರು: 'ಜನ ಕಳ್ಳರಿಗೆ ಮತ ಹಾಕುವುದನ್ನು ಬಿಡುವವರೆಗೂ ನಮ್ಮ ದೇಶ ಉದ್ಧಾರ ಆಗುವುದಿಲ್ಲ’ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

’ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಗೆ ಮೀಸಲು ನಿಗದಿಯಲ್ಲಿ ಸರ್ಕಾರ ರೋಸ್ಟರ್ ನಿಯಮ ಪಾಲಿಸಿಲ್ಲ’ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಸಮಾಧಾನ ವ್ಯಕ್ತಪಡಿಸಿದೆ.‌

’1974ರಿಂದ ಯಾವ ಸರ್ಕಾರವೂ ಚುನಾವಣೆಯಲ್ಲಿ ವಿವಿಧ ಸಮುದಾಯಗಳಿಗೆ ಮೀಸಲು ಕಲ್ಪಿಸಲು ಶಾಶ್ವತ ನಿಯಮಗಳನ್ನು ಮಾಡಿಲ್ಲ' ಎಂದು ನ್ಯಾಯಪೀಠ ಅತೃಪ್ತಿ ಹೊರಹಾಕಿದೆ.

’ಅಧಿಕಾರಕ್ಕೆ ಬಂದ ಸರ್ಕಾರಗಳು ಶಾಶ್ವತ ನಿಯಮ ರೂಪಿಸುವಲ್ಲಿ ನಿರ್ಲಕ್ಷ್ಯ ವಹಿಸಿವೆ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಇದೇ ಪರಿಸ್ಥಿತಿ ಮುಂದುವರಿದಿದೆ‌‌’ ಎಂದು ನ್ಯಾಯಪೀಠ ಹೇಳಿದೆ.

’ಜನರೂ ಚುನಾವಣೆ ಸಂದರ್ಭದಲ್ಲಿ ಮಾತ್ರ ಮೀಸಲು ವಿಚಾರವಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸುತ್ತಾರೆ‌. ಚುನಾವಣೆ ಬಳಿಕ ಮರೆತು ಸುಮ್ಮನಾಗುತ್ತಾರೆ' ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿದೆ.

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !