ಶನಿವಾರ, ಡಿಸೆಂಬರ್ 14, 2019
21 °C

ಪುತ್ತೂರು: ಅಜ್ಜ, ಮೊಮ್ಮಗಳ ಕೊಲೆ, ಹಂತಕರು ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು(ದ.ಕ.): ಇಲ್ಲಿನ ಕುರಿಯದ ಹೊಸಮಾರು ಎಂಬಲ್ಲಿ ಮಾರಾಕಾಸ್ತ್ರದಿಂದ ಮೂವರ ಮೇಲೆ ಹಲ್ಲೆ ನಡೆಸಲಾಗಿದ್ದು, ಅಜ್ಜ ಹಾಗೂ ಮೊಮ್ಮಗಳನ್ನು ಕೊಲೆ ಮಾಡಲಾಗಿದೆ.

ಕುರಿಯ ನಿವಾಸಿ ಕೊಗ್ಗು ಸಾಹೇಬ್ (65) ಮತ್ತು ಅವರ ಮೊಮ್ಮಗಳು 9ನೇ ತರಗತಿ ವಿದ್ಯಾರ್ಥಿನಿ ಸಮೀಹ ಬಾನು ಕೊಲೆಯಾದವರು.

ಮನೆಯಲ್ಲಿ ಮೂವರೇ ಇದ್ದು ಇದರಲ್ಲಿ ಇಬ್ಬರು ಕೊಲೆಯಾಗಿದ್ದಾರೆ. ಕೊಗ್ಗು ಸಾಹೇಬ್ ಅವರ ಪತ್ನಿ ಖತೀಜಾ ಬಿ. ಅವರು ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲೆಯಾದ ಕೊಗ್ಗು ಸಾಹೇಬರವರ ಪುತ್ರ ರಝಾಕ್ ಪುತ್ತೂರಿನಲ್ಲಿ ವಾಸವಾಗಿದ್ದು, ಮಂಗಳವಾರ ಬೆಳಿಗ್ಗೆ ಹೊಸಮಾರು ಮನೆಗೆ ಬಂದಾಗ ಮೂವರು ರಕ್ತಸಿಕ್ತವಾಗಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಅವರು ಇತರರಿಗೆ ಮಾಹಿತಿ ನೀಡಿದ್ದು, ಸ್ಥಳೀಯರು ಬಂದು ನೋಡಿದಾಗ ಕೊಗ್ಗು ಸಾಹೇಬ್ ಮತ್ತು ಅವರ ಮೊಮ್ಮಗಳು ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ಹಂತಕರು ಯಾರೆಂಬುದು ತಿಳಿದು ಬಂದಿಲ್ಲ. ಸದ್ಯ ಸಂಪ್ಯ ಠಾಣಾ ಸಬ್‌ಇನ್‌ಸ್ಪೆಕ್ಟರ್ ಸಕ್ತಿವೇಲು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು