ಸಿದ್ಧಗಂಗಾಶ್ರೀ ಆರೋಗ್ಯ ತಪಾಸಣೆ, ಕೃತಕ ಉಸಿರಾಟ ಮುಂದುವರಿಕೆ ಅವಶ್ಯ: ಡಾ.ಮಂಜುನಾಥ್

7

ಸಿದ್ಧಗಂಗಾಶ್ರೀ ಆರೋಗ್ಯ ತಪಾಸಣೆ, ಕೃತಕ ಉಸಿರಾಟ ಮುಂದುವರಿಕೆ ಅವಶ್ಯ: ಡಾ.ಮಂಜುನಾಥ್

Published:
Updated:

ತುಮಕೂರು: ಡಾ.ಶಿವಕುಮಾರ ಸ್ವಾಮೀಜಿ ಅರೋಗ್ಯವನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಮಂಜುನಾಥ್ ನೇತೃತ್ವದಲ್ಲಿ ರಾಜೀವಗಾಂಧಿ ಇನ್ ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸಿಸಸ್ನ ನಿರ್ದೇಶಕ ಡಾ.ನಾಗರಾಜ್, ಜಯದೇವ ಆಸ್ಪತ್ರೆ ಅನಸ್ತೇಷಿಯಾ ವಿಭಾಗದ ಮುಖ್ಯಸ್ಥರಾದ ಎನ್. ಮಂಜುನಾಥ್, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ವೈದ್ಯರಾದ ಡಾ. ರವಿ ಅರ್ಜುನ್ ಅವರ ತಂಡ ಶುಕ್ರವಾರ ತಪಾಸಣೆ ನಡೆಸಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಮಂಜುನಾಥ್, ' ಸ್ವಾಮೀಜಿಯವರಿಗೆ ಸ್ವಂತ ಉಸಿರಾಟ ಶಕ್ತಿ ಕಡಿಮೆ ಇದೆ. ಕೃತಕ ಉಸಿರಾಟ ಮುಂದುವರಿಸುವ ಅವಶ್ಯಕತೆ ಇದೆ. ಹೃದಯಮಿಡಿತ, ನಾಡಿಮಿಡಿತ, ರಕ್ತ ದೊತ್ತಡ ಸ್ಥಿರವಾಗಿದೆ. ಆದಷ್ಟು ಬೇಗ ಗುಣಮುಖರಾಗುವ ಆಶಾವಾದವಿದೆ ಎಂದು ನುಡಿದರು.

ಪ್ರೊಟೀನ್ ಅಂಶ ಸುಧಾರಣೆಯಾಗಿದೆ. ಶ್ವಾಸಕೋಶ ಸೋಂಕಿಗೆ ವೈದ್ಯರು ಉತ್ತಮ ರೀತಿ ಚಿಕಿತ್ಸೆ ನೀಡುತ್ತಿದ್ದಾರೆ. ಶ್ವಾಸಕೋಶ ಶಕ್ತಿ ಸುಧಾರಣೆಯನ್ನು ಕಾಲವೇ ನಿರ್ಧರಿಸುತ್ತದೆ ಎಂದು ಹೇಳಿದರು.

ಸಿದ್ಧಗಂಗಾ ಆಸ್ಪತ್ರೆ ವೈದ್ಯರ ತಂಡ, ಚೆನ್ನೈ ರೇಲಾ ಆಸ್ಪತ್ರೆ ವೈದ್ಯರು, ಬಿಜಿಎಸ್ ಆಸ್ಪತ್ರೆ ವೈದ್ಯರ ತಂಡ ಪರಸ್ಪರ ಸಮಾಲೋಚನೆ ನಡೆಸಿ ಚಿಕಿತ್ಸೆ ನೀಡುತ್ತಿರುವ ಕ್ರಮ ಸರಿಯಾಗಿದೆ ಎಂದರು.

ಸಿದ್ಧಗಂಗಾ ಆಸ್ಪತ್ರೆಯ ತೀವ್ರ ನಿಗಾ ಘಟಕ ವ್ಯವಸ್ಥೆಯು ವರ್ಲ್ಡ್ ಕ್ಲಾಸ್ ಮಟ್ಟದ್ದಾಗಿದೆ. ಇಲ್ಲಿಂದ ಬೇರೆ ಕಡೆಗೆ ಸ್ವಾಮೀಜಿಯವರನ್ನು ಸ್ಥಳಾಂತರ ಮಾಡಿ ಚಿಕಿತ್ಸೆ ನೀಡುವ ಅವಶ್ಯಕತೆ ಇಲ್ಲ . ಎಲ್ಲ ತಜ್ಞ ವೈದ್ಯರು ಇದ್ದಾರೆ. ಚಿಕಿತ್ಸೆಗೆ ಬೇಕಾದ ಎಲ್ಲ ಸೌಕರ್ಯಗಳೂ ಇವೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !