ಡಾ.ರೈನಾ ಅವರಿಗೆ ಖುಷೂ ಸ್ಮಾರಕ ಪ್ರಶಸ್ತಿ

7

ಡಾ.ರೈನಾ ಅವರಿಗೆ ಖುಷೂ ಸ್ಮಾರಕ ಪ್ರಶಸ್ತಿ

Published:
Updated:
Deccan Herald

ಬೆಂಗಳೂರು: ಅಶೋಕ ಪರಿಸರ ಮತ್ತು ಪರಿಸರ ವಿಜ್ಞಾನ ಸಂಶೋಧನಾ ಸಂಸ್ಥೆ (ಏಟ್ರಿ) ವತಿಯಿಂದ ನೀಡಲಾಗುವ ‘ಟಿ.ಎನ್‌.ಖುಷೂ’ ಸ್ಮಾರಕ ಪ್ರಶಸ್ತಿಗೆ ಶಿವ್‌ ನಾದರ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ರಾಜೇಶ್ವರಿ ಎಸ್‌.ರೈನಾ ಆಯ್ಕೆಯಾಗಿದ್ದಾರೆ.

ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ಸತೀಶ್‌ ಧವನ್‌ ಸಭಾಂಗಣದಲ್ಲಿ ನ. 19ರಂದು ಸಂಜೆ 4.30ಕ್ಕೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿಯು ₹ 1 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ.

ಸಾಮಾಜಿಕ ವ್ಯವಸ್ಥೆ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಜ್ಞಾನ ವಿಕಾಸದ ಕ್ಷೇತ್ರಗಳಲ್ಲಿ ಡಾ.ರೈನಾ ಅವರು ಅಧ್ಯಯನ ನಡೆಸಿದ್ದಾರೆ. ಸುಸ್ಥಿರತೆ ಮತ್ತು ಸಮತೆಯ ಮೌಲ್ಯಗಳನ್ನು ಅವರ ಅಧ್ಯಯನವು ಒಳಗೊಂಡಿದೆ. ಇದರಿಂದ ಪರಿಸರ ಸಂಬಂಧಿ ಕ್ಷೇತ್ರಗಳಲ್ಲಿ ಅಧ್ಯಯನ ಮಾಡುವವರಿಗೆ ಅನುಕೂಲವಾಗಿದೆ.

ಕೃಷಿ ಕ್ಷೇತ್ರದಲ್ಲಿ ಹಲವಾರು ಪರ್ಯಾಯ ಸುಸ್ಥಿರ ಅಭ್ಯಾಸಗಳನ್ನು ಗುರುತಿಸಿ ಅಧ್ಯಯನ ಮಾಡಿದವರಲ್ಲಿ ಡಾ.ರೈನಾ ಮೊದಲಿಗರು. ದೇಸಿ ಕೃಷಿ ಜ್ಞಾನ ಮತ್ತು ಪದ್ಧತಿಗಳ ಮೇಲೆ ಹಸಿರು ಕ್ರಾಂತಿಯು ಮಾಡಿರುವ ದುಷ್ಪರಿಣಾಮಗಳ ಕುರಿತ ಸಂಶೋಧನೆಯನ್ನೂ ಅವರು ಮಾಡಿದ್ದಾರೆ. ಸದ್ಯ ಅವರು ಲಿಂಗ ತಾರತಮ್ಯ ಕುರಿತು ಅಧ್ಯಯನ ನಡೆಸುತ್ತಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹಿಳೆ ಮತ್ತು ಸುಸ್ಥಿರ ಅಭಿವೃದ್ಧಿ ವಿಷಯದ ಕುರಿತು ವಿಚಾರ ಗೋಷ್ಠಿ ನಡೆಯಲಿದೆ. ಅರ್ಘ್ಯಂ ಸಂಸ್ಥೆಯ ಮುಖ್ಯಸ್ಥರಾದ ರೋಹಿಣಿ ನೀಲೇಕಣಿ ಅವರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !