ಸಮ್ಮಿಶ್ರ ಸರ್ಕಾರ ಬಲವಂತ ಮದುವೆ

7
ಚಿಕ್ಕಬಳ್ಳಾಪುರದಲ್ಲಿ ಶಾಸಕ ಡಾ.ಕೆ.ಸುಧಾಕರ್ ಹೇಳಿಕೆ

ಸಮ್ಮಿಶ್ರ ಸರ್ಕಾರ ಬಲವಂತ ಮದುವೆ

Published:
Updated:

ಚಿಕ್ಕಬಳ್ಳಾಪುರ: ‘ಸಮ್ಮಿಶ್ರ ಸರ್ಕಾರ ಎನ್ನುವುದು ಬಲವಂತದಿಂದ ಮಾಡಿದ ಮದುವೆಯಂತಾಗಿದೆ. ಇನ್ನೂ ಪರಸ್ಪರ ಹೊಂದಾಣಿಕೆ, ಅರ್ಥ ಮಾಡಿಕೊಳ್ಳುವುದು ಆಗಬೇಕಿದೆ. ಅದಕ್ಕೆ ಸಮಯ ಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ತಾಲ್ಲೂಕಿನ ಪೆರೇಸಂದ್ರ ಕ್ರಾಸ್‌ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಮ್ಮಿಶ್ರ ಸರ್ಕಾರಕ್ಕೆ ನೂರು ದಿನ ತುಂಬಿದರೂ ಹಣಕಾಸು ವ್ಯವಸ್ಥೆ ಸರಿ ಹೋಗಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಇನ್ನೂ ಅನುದಾನ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಿದ್ದರಾಮಯ್ಯ ಅವರು ನಾಳೆಯೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿಲ್ಲ. ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಇದೆ. 30 ಸ್ಥಾನಗಳಿದ್ದವರೇ ಸಿಎಂ ಆಗಿದ್ದಾರೆ. 80 ಸ್ಥಾನಗಳನ್ನು ಹೊಂದಿರುವವರು ಸಿಎಂ ಆಗಬಾರದು ಎಂದು ಎಲ್ಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಮರು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !