ತೀವ್ರ ಬರ: ₹ 38 ಕೋಟಿ ಬಿಡುಗಡೆ

ಬುಧವಾರ, ಏಪ್ರಿಲ್ 24, 2019
32 °C

ತೀವ್ರ ಬರ: ₹ 38 ಕೋಟಿ ಬಿಡುಗಡೆ

Published:
Updated:

ಬೆಂಗಳೂರು: ತೀವ್ರ ಬರ ಎದುರಿಸುತ್ತಿರುವ 10 ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಒಟ್ಟು ₹ 38 ಕೋಟಿ ಬಿಡುಗಡೆ ಮಾಡಿದೆ.

ವಿಜಯಪುರ, ದಾವಣಗೆರೆ, ಹಾಸನ, ಕೊಪ್ಪಳ (ತಲಾ ₹ 5 ಕೋಟಿ), ಚಿತ್ರದುರ್ಗ, ಕಲಬುರ್ಗಿ, ಗದಗ, ಕೋಲಾರ, ರಾಮನಗರ, ಯಾದಗರಿ (ತಲಾ ₹ 3 ಕೋಟಿ) ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ.

ಬರ ಪರಿಹಾರ ಕಾರ್ಯಗಳಿಗೆ ರಾಜ್ಯ ಪರಿಹಾರ ವಿಪತ್ತು ಪರಿಹಾರ ನಿಧಿಯಿಂದ ಈ ಹಣ ನೀಡಲಾಗಿದೆ.

ಅನುದಾನವನ್ನು ತುರ್ತು ಕುಡಿಯುವ ನೀರಿನ ಪೂರೈಕೆ ಮತ್ತು ಜಾನುವಾರು ಸಂರಕ್ಷಣೆಗೆ ವೆಚ್ಚ ಮಾಡಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಪ್ರಸಕ್ತ ವರ್ಷ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಮಳೆ ಕೊರತೆಯಿಂದ ರಾಜ್ಯದ 162 ತಾಲ್ಲೂಕುಗಳನ್ನು ಬರ‍ಪೀಡಿತ ಎಂದು ಘೋಷಿಸಲಾಗಿದೆ. ಈ ತಾಲ್ಲೂಕುಗಳಲ್ಲಿ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಮತ್ತು ಮೇವು ಸಮಸ್ಯೆ ತೀವ್ರಗೊಂಡಿತ್ತು. ಇದೀಗ ಕೆಲವು ಜಿಲ್ಲೆಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

ಹೀಗಾಗಿ, ಬರ ಪೀಡಿತ ಪ್ರದೇಶಗಳಿಗೆ ತುರ್ತು ಆಗಿ ಹಣದ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿಗಳು ಬೇಡಿಕೆ ಸಲ್ಲಿಸಿದ್ದರು. ಈ ಬೇಡಿಕೆಗೆ ಪೂರಕವಾಗಿ ಸರ್ಕಾರ ಹಣ ಬಿಡುಗಡೆ ಮಾಡಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !