ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರ: ರಾಜ್ಯಕ್ಕೆ ₹ 434 ಕೋಟಿ ಬಿಡುಗಡೆ

Last Updated 2 ಮಾರ್ಚ್ 2019, 18:20 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯದಲ್ಲಿ ಕಳೆದ ವರ್ಷ (2018–19) ಮುಂಗಾರು ವೈಫಲ್ಯದಿಂದ ತಲೆದೋರಿದ್ದ ಬರ ಪರಿಸ್ಥಿತಿಯಿಂದ ಉಂಟಾಗಿರುವ ನಷ್ಟ ಪರಿಹಾರವಾಗಿ ಕೇಂದ್ರ ಸರ್ಕಾರ ಶುಕ್ರವಾರ ₹ 434.62 ಕೋಟಿ ಬಿಡುಗಡೆ ಮಾಡಿದೆ.

ಕೇಂದ್ರದ ಗೃಹ ಸಚಿವ ರಾಜನಾಥ ಸಿಂಗ್‌ ನೇತೃತ್ವದ ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿ (ಎನ್‌ಡಿಆರ್‌ಎಫ್‌)ಯ ಉನ್ನತ ಮಟ್ಟದ ಸಮಿತಿ ಕಳೆದ ಫೆಬ್ರುವರಿ 20ರಂದು ಸಭೆ ನಡೆಸಿ ರಾಜ್ಯಕ್ಕೆ ₹ 949.49 ಕೋಟಿ ಪರಿಹಾರ ನೀಡಲು ನಿರ್ಧರಿಸಿತ್ತು. ಆರ್‌ಬಿಐ ಸೂಚನೆಯ ಮೇರೆಗೆಪರಿಹಾರದ ಮೊದಲ ಕಂತಿನ ರೂಪದಲ್ಲಿ ಈ ಮೊತ್ತವನ್ನು ಕರ್ನಾಟಕ ಸರ್ಕಾರದ ಖಾತೆಗೆ ಜಮಾ ಮಾಡಲಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿ ಬಾಕಿ ಮೊತ್ತವನ್ನು ಎರಡನೇ ಕಂತಿನರೂಪದಲ್ಲಿ ನೀಡುವುದಾಗಿ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT