ರಾಮನಗರ: ಕುಡಿಯುವ ನೀರಿಗಾಗಿ ಜನರ ಪರದಾಟ

ಗುರುವಾರ , ಏಪ್ರಿಲ್ 25, 2019
29 °C
ಕೊಳವೆಬಾವಿಗಳೂ ಬಂದ್‌

ರಾಮನಗರ: ಕುಡಿಯುವ ನೀರಿಗಾಗಿ ಜನರ ಪರದಾಟ

Published:
Updated:
Prajavani

ರಾಮನಗರ: ನಗರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು, ಕೆಲವು ವಾರ್ಡ್‌ಗಳಿಗೆ ಹತ್ತು ದಿನಕ್ಕೆ ಒಮ್ಮೆ ನೀರು ಪೂರೈಕೆ ಆಗುತ್ತಿದೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ನೀರು ಪೂರೈಕೆ ಸವಾಲಾಗಿದೆ.

ಮೂರನೇ ವಾರ್ಡ್‌ ವ್ಯಾಪ್ತಿಯಲ್ಲಿ ಕಳೆದ ಹತ್ತು ದಿನದಿಂದ ಕುಡಿಯುವ ನೀರು ಪೂರೈಕೆ ಆಗಿಲ್ಲ. ವಾರ್ಡ್‌ನಲ್ಲಿ ಇದ್ದ ಕೊಳವೆ ಬಾವಿ ಯಂತ್ರವೂ ಕೆಟ್ಟು ನಿಂತಿದ್ದು, ದುರಸ್ತಿಗೆಂದು ಕೊಂಡೊಯ್ಯಲಾಗಿದೆ. ಹೀಗಾಗಿ ವಾರ್ಡ್‌ ನಿವಾಸಿಗಳು ನೀರಿಲ್ಲದೆ ತತ್ತರಿಸುತ್ತಿದ್ದಾರೆ. ಗುರುವಾರ ಸ್ಥಳೀಯರು ನಗರಸಭೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಅಳಲು ತೋಡಿಕೊಂಡ ಬಳಿಕವಷ್ಟೇ ಒಂದು ಟ್ಯಾಂಕರ್ ನೀರು ಪೂರೈಕೆ ಆಗಿದೆ.

‘ವಾರಕ್ಕೆ ಒಮ್ಮೆಯೂ ನೀರು ಸಿಗದ ಕಾರಣ ತೀವ್ರ ಸಮಸ್ಯೆಯಾಗಿದೆ. ನಿತ್ಯ ಕಾರ್ಯಗಳಿಗೂ ನೀರಿಲ್ಲ. ಹಣ ತೆತ್ತು ಟ್ಯಾಂಕರ್ ಮೂಲಕ ನೀರು ಪಡೆಯುತ್ತಿದ್ದೇವೆ. ಸಮಸ್ಯೆ ಬಗೆಹರಿಸಬೇಕಾದ ಸ್ಥಳೀಯ ಶಾಸಕರು ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡು ಜನರ ಕಾಳಜಿ ಮರೆತಿದ್ದಾರೆ’ ಎಂದು ಸ್ಥಳೀಯರು ಅಳಲು ತೋಡಿಕೊಂಡರು.

‘ನೀರು ಪೂರೈಕೆ ಸ್ಥಗಿತಗೊಳ್ಳಲು ಟ್ಯಾಂಕರ್ ಲಾಬಿಯೂ ಕಾರಣ ಇರಬಹುದು. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದರು.

***

ವಿದ್ಯುತ್ ಕೊರತೆಯಿಂದಾಗಿ ಕೊಳವೆ ಬಾವಿಗಳು ಓಡುತ್ತಿಲ್ಲ. ಇದರಿಂದ ನೀರು ಪೂರೈಕೆ ತೊಂದರೆ ಆಗಿದ್ದು, ಪರಿಹಾರ ಕಂಡುಕೊಳ್ಳಲಾಗುತ್ತಿದೆ.

- ಶುಭಾ ಆಯುಕ್ತೆ, ರಾಮನಗರ ನಗರಸಭೆ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !