ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿಯಲ್ಲಿ ಡ್ರೋನ್ ಕಣ್ಗಾವಲು

Last Updated 30 ಮಾರ್ಚ್ 2020, 13:32 IST
ಅಕ್ಷರ ಗಾತ್ರ

ಶಿರಸಿ: ಲಾಕ್‌ಡೌನ್ ಉಲ್ಲಂಘಿಸಿ, ಅನಗತ್ಯವಾಗಿ ಓಡಾಡುವವರ ಮೇಲೆ ಡ್ರೋನ್ ಮೂಲಕ ಕಣ್ಣಿಡಲು ಪೊಲೀಸ್ ಇಲಾಖೆ ಮುಂದಾಗಿದೆ. ನಗರದಲ್ಲಿ ಸೋಮವಾರ ಮಧ್ಯಾಹ್ನದಿಂದ ಈ ಕಾರ್ಯಾಚರಣೆ ನಡೆಯುತ್ತಿದೆ.

ಕೋಟೆಕೆರೆ ಸಮೀಪ 20ಕ್ಕೂ ಹೆಚ್ಚು ಮಕ್ಕಳು ಆಟವಾಡುತ್ತಿರುವುದನ್ನು ಡ್ರೋನ್‌ನಲ್ಲಿ ಸೆರೆಯಾಗಿರುವ ಚಿತ್ರದಲ್ಲಿ ಗಮನಿಸಿದ ಪೊಲೀಸರು, ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಗುಂಪು ಚದುರಿಸಿದರು. ಸಾಮಾಜಿಕ ಜಾಲತಾಣದ ಮೂಲಕ ಈ ಸಂದೇಶ ಎಲ್ಲೆಡೆ ರವಾನೆಯಾಗುತ್ತಿದ್ದಂತೆ, ಜನರು ಮನೆಯಿಂದ ಹೊರಬರಲು ಹೆದರಿದರು.

ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾರ್ಗದರ್ಶನದಲ್ಲಿ ಶಿರಸಿ, ಭಟ್ಕಳ, ಕಾರವಾರ, ದಾಂಡೇಲಿಯಲ್ಲಿ ಈ ಕಾರ್ಯಾಚರಣೆ ಆರಂಭವಾಗಿದೆ. ಇನ್ನುಳಿದ ಕಡೆಗಳಲ್ಲೂ ಬರುವ ದಿನಗಳಲ್ಲಿ ಇದು ನಡೆಯಲಿದೆ.

‘ಪ್ರಜಾವಾಣಿ’ ಸೋಮವಾರದ (ಮಾ.30) ಸಂಚಿಕೆಯಲ್ಲಿ ‘ಕುವೈತ್‌ನಲ್ಲಿ ಗುಂಪು ಚದುರಿಸುವ ಡ್ರೋನ್’ ತಲೆಬರಹದ ಅಡಿಯಲ್ಲಿ ಅಲ್ಲಿನ ಸರ್ಕಾರ ಲಾಕ್‌ಡೌನ್ ಸಂದರ್ಭದಲ್ಲಿ ಡ್ರೋನ್ ಬಳಕೆ ಮಾಡುವುದನ್ನು ಪ್ರಕಟಿಸಿ ಗಮನ ಸೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT