ರೈಲಿನಲ್ಲೇ ಗಾಂಜಾ ಸೇವನೆ; ಹರಿದಾಡಿದ ವಿಡಿಯೊ

ಗುರುವಾರ , ಮಾರ್ಚ್ 21, 2019
32 °C

ರೈಲಿನಲ್ಲೇ ಗಾಂಜಾ ಸೇವನೆ; ಹರಿದಾಡಿದ ವಿಡಿಯೊ

Published:
Updated:
Prajavani

ಬೆಂಗಳೂರು: ಚಲಿಸುತ್ತಿದ್ದ ರೈಲಿನಲ್ಲೇ ಯುವಕನೊಬ್ಬ ಗಾಂಜಾ ಸೇದಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ಹರಿದಾಡಿದೆ. ಆ ಸಂಬಂಧ ತನಿಖೆಗೆ ಸೂಚಿಸಿರುವುದಾಗಿ ರೈಲ್ವೆ ಇಲಾಖೆಯ ಸೇವಾ ವಿಭಾಗ ತಿಳಿಸಿದೆ.

ಮೈಸೂರಿನಿಂದ ಬಾಗಲಕೋಟೆಗೆ ಹೊರಟಿದ್ದ ಬಸವ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ, ಪುಸ್ತಕದಲ್ಲಿ ಗಾಂಜಾವನ್ನು ಬಚ್ಚಿಟ್ಟುಕೊಂಡು ಸೇದುತ್ತಿದ್ದ. ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ ಯುವತಿಯೊಬ್ಬರು ಟ್ವಿಟರ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

‘ಕೆಂಗೇರಿ ನಿಲ್ದಾಣದ ಬಳಿ ಈ ಯುವಕ ಮಾದಕ ವಸ್ತು ಸೇವನೆ ಮಾಡುತ್ತಿರುವುದನ್ನು ಕಂಡೆ. ಈತನ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಯುವತಿಯು ರೈಲ್ವೆ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಯುವತಿಯ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕರು ಸಹ ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. 

ವಿಡಿಯೊ ಹರಿದಾಡುತ್ತಿದ್ದಂತೆ ಎಚ್ಚೆತ್ತಕೊಂಡ ರೈಲ್ವೆ ಇಲಾಖೆಯ ಸೇವಾ ವಿಭಾಗ, ‘ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರೈಲ್ವೆ ಪೊಲೀಸ್‌ ಪಡೆಗೆ ಈಗಾಗಲೇ ಸೂಚನೆ ನೀಡಲಾಗಿದೆ’ ಎಂದು ಹೇಳಿದೆ. 

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !