ಸೋಮವಾರ, ಫೆಬ್ರವರಿ 17, 2020
31 °C

ನಟ ಧ್ರುವ ಸರ್ಜಾ-ಪ್ರೇರಣಾ ‘ಅದ್ದೂರಿ’ ವಿವಾಹ, ಸೋಮವಾರ ಅಭಿಮಾನಿಗಳಿಗೆ ಭೋಜನಕೂಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಯಕ ನಟ ಧ್ರುವ ಸರ್ಜಾ ಹಾಗೂ ಬಾಲ್ಯ ಸ್ನೇಹಿತೆ ಪ್ರೇರಣಾ ಅವರ ವಿವಾಹ ಇಲ್ಲಿನ ಜೆ.ಪಿ.ನಗರದಲ್ಲಿ ಭಾನುವಾರ ಅದ್ಧೂರಿಯಾಗಿ ನೆರವೇರಿತು.

ಇಲ್ಲಿನ ಸಂಸ್ಕೃತಿ ಬೃಂದಾವನ ಕನ್ವೆಷನ್ ಹಾಲ್‌ನಲ್ಲಿ ನಡೆದ ವಿವಾಹ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿ ನವ ವಧು ವರರನ್ನು ಆಶೀರ್ವದಿಸಿದರು. 

ಬಾಲ್ಯದಿಂದಲೂ ಇಬ್ಬರೂ ಸ್ನೇಹಿತರಾಗಿದ್ದು, ಸ್ನೇಹ ಮದುವೆಯ ಹಂತಕ್ಕೆ ತಲುಪಿದಾಗ ಇಬ್ಬರ ಮನೆಯವರು ಒಪ್ಪಿ ವಿವಾಹ ನಿಶ್ಚಿತಾರ್ಥ ನಡೆದಿತ್ತು. 

ವಿವಾಹದಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ದಂಪತಿ, ರವಿಶಂಕರ್, ಹಿರಿಯ ನಟ ರಾಜೇಶ್, ಅರ್ಜುನ್ ಸರ್ಜಾ, ಶರಣ್, ರಮೇಶ್ ಅರವಿಂದ್, ತರುಣ್ ಸುಧೀರ್, ಡಾಲಿ ಧನಂಜಯ್, ಶ್ರೀಮುರಳಿ, ಸೃಜನ್ ಲೋಕೇಶ್, ವಿನಯ್ ರಾಜಕುಮಾರ್ , ಸುಂದರ್ ರಾಜ್ ಪ್ರಮೀಳಾ ಜೋಷಾಯ್, ತಾರಾ ಹಾಗೂ ಇತರರು ಭಾಗವಹಿಸಿ ನವಜೋಡಿಗೆ ಶುಭಕೋರಿದರು. 

ಧ್ರುವಸರ್ಜಾ ಆಂಜನೇಯನ ಭಕ್ತನಾಗಿದ್ದು, ಕಲ್ಯಾಣಮಂಟಪದ ವೇದಿಕೆಯ ಮುಂಬಾಗದಲ್ಲಿ ಆಂಜನೇಯನ ಮೂರ್ತಿ ಸ್ಥಾಪಿಸಲಾಗಿದೆ. ಆ ವಿಗ್ರಹದ ಮುಂದೆ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದಾರೆ. ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು ಪಾಲ್ಗೊಂಡು  ಶುಭಕೋರಿದ್ದಾರೆ. ಪ್ರೇರಣಾ ಅವರು ಬಾಟಲ್ ಗ್ರೀನ್ ಲೆಹೆಂಗಾದಲ್ಲಿ ಮಿಂಚುತ್ತಿದ್ದರೆ, ಧ್ರುವಸರ್ಜಾ ಪರೇಶ್ ಲಂಬಾ ವೆಡ್ಡಿಂಗ್ ಶೂಟ್ ಧರಿಸಿ ಮಿಂಚಿದರು. 

ಸೋಮವಾರ ಅಭಿಮಾನಿಗಳಿಗಾಗಿ ಭೋಜನಕೂಟ

ಇದೇ ಕಲ್ಯಾಣ ಮಂಟಪದಲ್ಲಿ ಅಭಿಮಾನಿಗಳಿಗಾಗಿ ಪ್ರತ್ಯೇಕ ಭೋಜನಕೂಟ ಏರ್ಪಡಿಸಲಾಗಿದೆ. ಈ ಕಾರಣದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಭಾನುವಾರದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಇರಲಿಲ್ಲ. 

ದಿವಂಗತ ಶಕ್ತಿಪ್ರಸಾದ್ ಅವರ ಮೊಮ್ಮಗನಾದ ಧ್ರುವ ಸರ್ಜಾ ಕನ್ನಡ ಚಿತ್ರರಂಗಕ್ಕೆ ‘ಅದ್ದೂರಿ’ ಚಿತ್ರದ ಮೂಲಕ ಎಂಟ್ರಿಕೊಟ್ಟರು. ನಂತರ ಅವರು ನಾಯಕನಟನಾಗಿ ಕಾಣಿಸಿಕೊಂಡ ಬಹದ್ದೂರ್, ಭರ್ಜರಿ ಸಿನಿಮಾಗಳು ಯಶಸ್ವಿಯಾಗಿವೆ. ಈಗ ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರ ಬಿಡುಗಡೆ ಹಂತದಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು