ಹೊಸದುರ್ಗ: ಭೂಮಿ ಕಂಪಿಸಿದ ಅನುಭವ

7

ಹೊಸದುರ್ಗ: ಭೂಮಿ ಕಂಪಿಸಿದ ಅನುಭವ

Published:
Updated:

ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಕಂಚೀಪುರ ಹಾಗೂ ಗುಡ್ಡದನೇರಳೆಕೆರೆ ಗ್ರಾಮಗಳಲ್ಲಿ ಮಂಗಳವಾರ ಭೂಮಿ ಕಂಪಿಸಿದ ಅನುಭವವಾಗಿದೆ.

ಮಂಗಳವಾರ ಬೆಳಿಗ್ಗೆ 10.30ರ ಸುಮಾರಿಗೆ ಭಾರಿ ಶಬ್ದ ಕೇಳಿಸಿದೆ. ಬಳಿಕ ಒಂದು ಸೆಕೆಂಡ್ ಕಾಲ ಭೂಮಿ ಕಂಪಿಸಿದ ಅನುಭವ ಅಗಿದ್ದರಿಂದ, ಗಾಬರಿಗೊಂಡ ಗ್ರಾಮಸ್ಥರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಈ ಕುರಿತು ಕಂಚೀಪುರ ಗ್ರಾಮಸ್ಥರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಎರಡು ವರ್ಷಗಳ ಹಿಂದೆ ಕಂಚೀಪುರ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿತ್ತು.

ಗುಡ್ಡದನೇರಲಕೆರೆ, ತಾರೀಕೆರೆ, ಸಿದ್ದಾಪುರ, ಕ್ರುಶ್ಣಪುರ, ಕಸಪ್ಪನ ಹಳ್ಳಿ ಸೇರಿ ಇನ್ನಿತರ ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ. ಅಕ್ರಮ ಗಣಿಗಾರಿಕೆ, ಮರಳು ದಂಧೆ, ಕಲ್ಲು ಗಣಿಗಾರಿಕೆ, ಅರಣ್ಯ ಭೂಮಿ ಅತಿಕ್ರಮದಿಂದ ಭೂಕಂಪವಾಗಿದೆ ಎಂಬುದು ಜನರ ಆರೋಪ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭೂಕಂಪವನ್ನು ದೃಢಪಡಿಸಿಲ್ಲ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !