ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್‌ 26ರಂದು ‘ಕಂಕಣ ಸೂರ್ಯಗ್ರಹಣ’

Last Updated 2 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಚಿತ್ರದುರ್ಗ: ಡಿಸೆಂಬರ್‌ 26ರಂದು ಬೆಳಿಗ್ಗೆ 8.30ರಿಂದ 11.30ರವರೆಗೆ ಬಾಹ್ಯಾಕಾಶದಲ್ಲಿ ಒಂದು ವಿಸ್ಮಯ ಸಂಭವಿಸಲಿದೆ. ಅದುವೇ ‘ಕಂಕಣ ಸೂರ್ಯಗ್ರಹಣ’.

10 ವರ್ಷಗಳ ಹಿಂದೆ ಇದು ಸಂಭವಿಸಿತ್ತು. ಆಗ ಕನ್ಯಾಕುಮಾರಿ, ರಾಮೇಶ್ವರ ಮೂಲಕ ಗ್ರಹಣದ ಛಾಯೆ ಹಾದುಹೋಗಿತ್ತು. ಈ ಬಾರಿ ದಕ್ಷಿಣ ಭಾರತದ ಮಂಗಳೂರು, ಕಾಸರಗೋಡು, ನಂಜನಗೂಡು, ಊಟಿಯಲ್ಲಿ ಗ್ರಹಣವನ್ನು ವೀಕ್ಷಿಸಬಹುದು.

ಈ ಗ್ರಹಣ ಸೌದಿ ಆರೇಬಿಯಾದಿಂದ ಆರಂಭವಾಗಿ ಸುಮಾರು 220 ಕಿ.ಮೀ.ನಷ್ಟು ಚಲಿಸಿ ಹಿಂದೂ ಮಹಾಸಾಗರದ ಗಾಮಾ ದ್ವೀಪಗಳಲ್ಲಿ ಕೊನೆಗೊಳ್ಳಲಿದೆ ಎಂದು ಹವ್ಯಾಸಿ ಖಗೋಳ ವೀಕ್ಷಕ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಚಿತ್ರದುರ್ಗ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಚ್‌.ಎಸ್‌.ಟಿ.ಸ್ವಾಮಿ ತಿಳಿಸಿದ್ದಾರೆ.

ವೈಜ್ಞಾನಿಕ ಹಿನ್ನೆಲೆ: ಅಂದು ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಅಡ್ಡ ಬರಲಿದ್ದು ಭೂಮಿಯ ನೆರಳು ಚಂದ್ರನ ಮೇಲೆ ಬೀಳಲಿದೆ. ಸೂರ್ಯನ ಸುತ್ತಲೂ ಉಂಗುರಾಕಾರದ ರಚನೆ ಮೂಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT