ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಭಾರಿ ಬೇಡಿಕೆ: ದಾಖಲಾತಿ 30ಕ್ಕೆ ಸೀಮಿತ?

Last Updated 7 ಜೂನ್ 2019, 2:09 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಆರಂಭವಾಗಲಿರುವ ಆಂಗ್ಲ ಮಾಧ್ಯಮ ತರಗತಿಯಲ್ಲಿ 30ಕ್ಕಿಂತ ಹೆಚ್ಚು ಮಕ್ಕಳಿಗೆ ಪ್ರವೇಶ ಅವಕಾಶ ಸಿಗುವ ಸಾಧ್ಯತೆ ಕಡಿಮೆ.

ಆಂಗ್ಲ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ. ಅನೇಕ ಕಡೆ
ಗಳಲ್ಲಿ ಪ್ರವೇಶ ನೀಡುವುದು ಕಷ್ಟವಾಗಿದ್ದು, ಮಕ್ಕಳ ಪ್ರವೇಶ ಸಂಖ್ಯೆಯನ್ನು ಹೆಚ್ಚಿಸುವ ಬೇಡಿಕೆ ವ್ಯಕ್ತವಾಗಿದೆ. ಆದರೆ, ಸದ್ಯದ ಮಟ್ಟಿಗೆ ಅಸಾಧ್ಯ ಎಂಬುದು ಶಿಕ್ಷಣ ಇಲಾಖೆ ಅಭಿಮತ.

‘ಪೋಷಕರಿಂದ ಬೇಡಿಕೆ ಇರುವ ವಿಷಯ ಗೊತ್ತಾಗಿದೆ. ಆದರೆ ಸರ್ಕಾರ ಈ ವರ್ಷ ಪೈಲಟ್‌ ಯೋಜನೆಯಂತೆ ಆಂಗ್ಲ ಮಾಧ್ಯಮ ಆರಂಭಿಸುತ್ತಿದೆ. ಸದ್ಯ ಒಂದು ತರಗತಿಗೆ ಸೀಮಿತವಾಗಿ ಸಂಪನ್ಮೂಲ ಒದಗಿಸಲಾಗಿದೆ. ಈ ವರ್ಷ ಹೆಚ್ಚುವರಿ ವಿಭಾಗ ಮಾಡಿದರೆ ಮುಂದಿನ ವರ್ಷವೂ ಅದನ್ನು ಮುಂದುವರಿಸಬೇಕಾಗುತ್ತದೆ. ಇದು ಬಹಳ ಕಷ್ಟದ ವಿಚಾರ. ಆದರೂ ಮುಖ್ಯಮಂತ್ರಿ ಜತೆಗೆ ಒಂದೆರಡು ದಿನಗಳಲ್ಲಿ ಈ ವಿಷಯ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹಲವು ಜಿಲ್ಲೆಗಳಲ್ಲಿ ಪೋಷಕರೇ ಮುಂದೆ ಬಂದು ತರಗತಿಗಳಿಗೆ ಅತಿಥಿ ಶಿಕ್ಷಕರನ್ನು ನಿಯೋಜಿಸುವ ಭರವಸೆ ನೀಡುತ್ತಿದ್ದಾರೆ. ಹೀಗಾದಲ್ಲಿ ಹೆಚ್ಚುವರಿ ವಿಭಾಗ ತೆರೆಯಬಹುದೇ ಎಂದು ಕೇಳಿದಾಗ, ಇಂತಹ ಹಲವು ಸಾಧ್ಯತೆಗಳ ಬಗ್ಗೆ ಸಲಹೆಗಳು ಬಂದಿವೆ. ಸದ್ಯ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದರು.

ಯೋಜನೆ ವಿಫಲಕ್ಕೆ ಕೆಲವರ ಕಾತರ: ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭವಾಗಿರುವುದರಿಂದ ಹಲವು ಖಾಸಗಿ ಶಾಲೆಗಳು ಈಗಾಗಲೇ ಸಿಟ್ಟಿಗೆದ್ದಿವೆ. ಯೋಜನೆ ವಿಫಲವಾಗುವುದನ್ನು ಅವುಗಳು ಎದುರು ನೋಡುತ್ತಿವೆ. ಹೆಚ್ಚುವರಿಮಕ್ಕಳಿಗೆ ಅವಕಾಶ ದೊರೆತರೆ ಮತ್ತೆ ತಮ್ಮ ಶಾಲೆಯತ್ತ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ಆತಂಕದಲ್ಲಿವೆ. ಸರ್ಕಾರ ಕೈಗೊಳ್ಳುವ ನಿರ್ಧಾರ ಈಗ ಬಹಳ ಮಹತ್ವದ್ದಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT