29 ಖಾಸಗಿ ಪಿಯು ಕಾಲೇಜುಗಳಿಗೆ ಮಾತ್ರ ಅವಕಾಶ

ಭಾನುವಾರ, ಜೂಲೈ 21, 2019
22 °C

29 ಖಾಸಗಿ ಪಿಯು ಕಾಲೇಜುಗಳಿಗೆ ಮಾತ್ರ ಅವಕಾಶ

Published:
Updated:

ಬೆಂಗಳೂರು: ಖಾಸಗಿ ಶಾಶ್ವತ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಆರಂಭಕ್ಕೆ ಆನ್‌ಲೈನ್‌ನಲ್ಲಿ 425 ಅರ್ಜಿಗಳು ಬಂದಿದ್ದವು. ಆದರೆ 29 ಕಾಲೇಜುಗಳ ಅರಂಭಕ್ಕೆ ಮಾತ್ರ ಅನುಮತಿ ನೀಡಲಾಗಿದೆ.

www.puc.kar.nic.in ವೆಬ್‌ಸೈಟ್‌ನಲ್ಲಿ ಅರ್ಜಿ ತಿರಸ್ಕೃತಗೊಳಿಸಿದ್ದಕ್ಕೆ ಕಾರಣ ನೀಡಲಾಗಿದೆ. ಜೂನ್‌ 25ರೊಳಗೆ ಪೂರಕ ದಾಖಲೆಗಳನ್ನು ನೀಡಬಹುದಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಬಂದಿದ್ದ 360 ಅರ್ಜಿಗಳ ಪೈಕಿ 200ರಷ್ಟು ಅರ್ಜಿಗಳನ್ನು ಪುರಸ್ಕರಿಸಲಾಗಿತ್ತು. ಇದು ಬಾರಿ ವಿವಾದ ಸೃಷ್ಟಿಸಿತ್ತು. ಈ ಬಾರಿ ಕಾಲೇಜುಗಳಿಗೆ ಇರುವ ಮೂಲಸೌಲಭ್ಯ ವಿಚಾರದಲ್ಲಿ ಕಠಿಣ ನಿಯಮಗಳನ್ನು ಪಾಲಿಸಿದ್ದು, ಹೀಗಾಗಿ ಹೆಚ್ಚಿನ ಅರ್ಜಿಗಳು ತಿರಸ್ಕೃತಗೊಳ್ಳುವಂತಾಗಿದೆ ಎಂದು ಹೇಳಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !