ಶೃಂಗೇರಿ ಪ್ರವಾಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳಿದ್ದ ಬಸ್ ಪಲ್ಪಿ

7
ಭದ್ರವತಿ ಪೂರ್ಣಪ್ರಜ್ಞಾ ಶಾಲೆ ವಿದ್ಯಾರ್ಥಿಗಳ ಬಸ್; ಎನ್‌ಆರ್‌ ಪುರ ಬಳಿ ಅಪಘಾತ

ಶೃಂಗೇರಿ ಪ್ರವಾಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳಿದ್ದ ಬಸ್ ಪಲ್ಪಿ

Published:
Updated:

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಸೌತಿಕೆರೆ ಬಳಿ ಶಾಲಾ ವಾಹನ ಪಲ್ಟಿಯಾಗಿದ್ದು, ವಿದ್ಯಾರ್ಥಿನಿ ದಿಯಾ (15) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 17 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ದಿಯಾ ಅವರು ಭದ್ರಾವತಿಯ ವಿಐಎಸ್ಎಲ್ ಕಾಲೊನಿ ನಿವಾಸಿ ಕರ್ನಲ್ ಶೆಖಾವತ್ ಪುತ್ರಿ.

ತೀವ್ರವಾಗಿ ಗಾಯಗೊಂಡಿರುವ ಕಿಶನ್, ನಂದನ್, ಯಶಸ್ವಿ, ಸುಮುಖ ಮತ್ತು ವೈಷ್ಣವಿ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಒಯ್ಯಲಾಗಿದೆ. ಐವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಎನ್ಆರ್ ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.

ಭದ್ರಾವತಿಯ ಪೂರ್ಣಪ್ರಜ್ಞಾ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ಶೃಂಗೇರಿಗೆ ಪ್ರವಾಸ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 14

  Sad
 • 0

  Frustrated
 • 5

  Angry

Comments:

0 comments

Write the first review for this !