ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿಎಂನಲ್ಲಿ ಮತ: ಯಾರಿಗೆ ಹಿತ

ಉಪ ಚುನಾವಣೆ: ಇದೇ 6ರಂದು ಮತಎಣಿಕೆ
Last Updated 4 ನವೆಂಬರ್ 2018, 6:23 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್–ಕಾಂಗ್ರೆಸ್‌ನ ‘ಮಿತ್ರ’ಕೂಟ ಹಾಗೂ ವಿರೋಧ ಪಕ್ಷ ಬಿಜೆಪಿ ನೇತಾರರ ಮುಂದಿನ ‘ರಾಜಕೀಯ’ಕ್ಕೆ ನಿರ್ಣಾಯಕವಾಗಿರುವ ಉಪ ಚುನಾವಣೆ ಮತದಾನ ಶನಿವಾರ ಮುಗಿದಿದ್ದು, ಸೋಲು–ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ.

ಮತದಾನದ ಪ್ರಮಾಣ ಬಹಿರಂಗವಾಗುತ್ತಿದ್ದಂತೆ, ಐದು ಕ್ಷೇತ್ರಗಳಲ್ಲಿ ಮಾತ್ರವಲ್ಲದೇ ರಾಜ್ಯದಾದ್ಯಂತ ರಾಜಕೀಯ ವಿಶ್ಲೇಷಣೆಗೆ ಉಪ ಚುನಾವಣೆ ನೆಪವಾಗಿದೆ. ಅದರಲ್ಲೂ ಬಳ್ಳಾರಿ, ಶಿವಮೊಗ್ಗ, ಜಮಖಂಡಿ ಕ್ಷೇತ್ರಗಳ ಫಲಿತಾಂಶ ಕುತೂಹಲ ಕೆರಳಿಸಿದೆ.

ಬಿಜೆಪಿಯ ಬಿ.ಎಸ್‌. ಯಡಿಯೂರಪ್ಪ, ಬಿ. ಶ್ರೀರಾಮುಲು, ಕಾಂಗ್ರೆಸ್‌ನ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಈ ಚುನಾವಣೆ ಸವಾಲಾಗಿದೆ.

ಮತಯಂತ್ರಗಳ ಲೋಪ, ಮತದಾನ ವಿಳಂಬ, ವಿವಿಧ ಪಕ್ಷಗಳ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ, ನೀತಿಸಂಹಿತೆ ಉಲ್ಲಂಘನೆಯಂಥ ಘಟನೆಗಳನ್ನು ಬಿಟ್ಟರೆ ಎಲ್ಲ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆ ನಡೆದಿವೆ.

ಏಜೆಂಟರೇ ಇಲ್ಲ: ರಾಮನಗರ ಕ್ಷೇತ್ರದ ಚುನಾವಣೆಯಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ, ಹಿಂದೆ ಸೂಚಿಸಿದ್ದ ಏಜೆಂಟರ ಹೆಸರುಗಳನ್ನು ವಾಪಸ್ ಪಡೆದರು. ಇದರಿಂದಾಗಿ 277 ಮತಗಟ್ಟೆಗಳಲ್ಲಿ ಬಿಜೆಪಿ ಏಜೆಂಟರೇ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT