ಕಲಬುರ್ಗಿ: ತಾಂತ್ರಿಕ ಸಮಸ್ಯೆಯಿಂದ ಕೈಕೊಟ್ಟ ಮತಯಂತ್ರಗಳು, ಮತದಾರರ ಆಕ್ರೋಶ

ಮಂಗಳವಾರ, ಜೂನ್ 18, 2019
29 °C

ಕಲಬುರ್ಗಿ: ತಾಂತ್ರಿಕ ಸಮಸ್ಯೆಯಿಂದ ಕೈಕೊಟ್ಟ ಮತಯಂತ್ರಗಳು, ಮತದಾರರ ಆಕ್ರೋಶ

Published:
Updated:

ಕಲಬುರ್ಗಿ: ಚಿಂಚೋಳಿ ಹಾಗೂ ಕುಂದಗೋಳದಲ್ಲಿ ಉಪ ಚುನಾವಣೆಯ ಮತದಾನ ಆರಂಭವಾಗಿದ್ದು, ಹಲವೆಡೆ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಮತದಾನಕ್ಕೆ ಅಡಚಣೆ ಉಂಟಾಗಿದೆ.  

ನೀಮಾ ಹೊಸಳ್ಳಿ, ‌ಮಿರಿಯಾಣ, ಸೋಮಲಿಂಗದಳ್ಳಿ, ವೆಂಕಟಾಪುರ, ಗಾರಂಪಳ್ಳಿ ಹಾಗೂ ಐನೊಳ್ಳಿಯಲ್ಲಿ ಮತಯಂತ್ರಗಳಲ್ಲಿ ದೋಷ ಕಂಡು ಬಂದಿದೆ.

ಮತದಾನ ತಡವಾದ ಹಿನ್ನೆಲೆ ಚುನಾವಣಾ ಅಧಿಕಾರಿಗಳು ಮತಗಟ್ಟೆಗಳಿಗೆ ದೌಡಾಯಿಸಿದ್ದಾರೆ. ಕೆಲವೆಡೆ ದೋಷ ಸರಿಪಡಿಸಿ ಮತದಾನಕ್ಕೆ ಅನುವು ಮಾಡಲಾಗಿದೆ.

ಚಿಂಚೋಳಿಯಲ್ಲಿ ಬೆಳಿಗ್ಗೆ 9 ಗಂಟೆವರೆಗೆ ಶೇ 7.88ರಷ್ಟು ಮತದಾನವಾಗಿದೆ.

ಕುಂದಗೋಳ ಉಪಚುನಾವಣೆ ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ಶೇ.9.59 ರಷ್ಟು ಮತದಾನವಾಗಿದೆ. ಇದುವರೆಗೆ 10919 ಪುರುಷರು ಹಾಗೂ 7241 ಮಹಿಳೆಯರು ಸೇರಿದಂತೆ ಒಟ್ಟು 18,160 ಜನ ತಮ್ಮ ಮತ ಚಲಾಯಿಸಿದ್ದಾರೆ.

ಕ್ಷೇತ್ರದಲ್ಲಿ ಒಟ್ಟು 189441 ಮತದಾರಿದ್ದು ಚುನಾವಣಾ ಕಣದಲ್ಲಿ 8 ಅಭ್ಯರ್ಥಿಗಳು ಇದ್ದಾರೆ.


ಕಲಬುರ್ಗಿ ಜಿಲ್ಲೆ ಕಾಳಗಿ ಪಟ್ಟಣದ ಮತಗಟ್ಟೆ ಸಂಖ್ಯೆ 215ರಲ್ಲಿ 105 ವರ್ಷದ ಬಸಮ್ಮ ಅವರು ಮತ ಚಲಾಯಿಸಲು ಕಾದು ಕುಳಿತಿರುವುದು ಕಂಡು ಬಂತು

 

 


ಕುಂದಗೋಳದ ಅಂಚಟಗೇರಿಯ ಮತ ಚಲಾಯಿಸಲು ಬಂದ ಅಂಗವಿಕಲೆ ಶಾಂತವ್ವ ವಾಲೀಕರ.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !