ಲೋಕಸಭೆ ಉಪಚುನಾವಣೆ ಪ್ರಶ್ನಿಸಿ ಮತ್ತೊಂದು ಪಿಐಎಲ್

7

ಲೋಕಸಭೆ ಉಪಚುನಾವಣೆ ಪ್ರಶ್ನಿಸಿ ಮತ್ತೊಂದು ಪಿಐಎಲ್

Published:
Updated:

ಬೆಂಗಳೂರು: ‘ಮಂಡ್ಯ, ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸುವ ಕೇಂದ್ರ ಚುನಾವಣಾ ಆಯೋಗದ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ’ ಎಂದು ಆಕ್ಷೇಪಿಸಿ ಹೈಕೋರ್ಟ್‌ಗೆ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಸಲ್ಲಿಸಿರುವ ಈ ಅರ್ಜಿ ತುರ್ತು ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿ‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ನಿರಾಕರಿಸಿತು.

‘ನಿಯಮನುಸಾರವೇ ಅರ್ಜಿ ವಿಚಾರಣೆಗೆ ಬರಲಿ. ಈ ಸಂಬಂಧ ರಿಜಿಸ್ಟ್ರಾರ್ ಮುಂದೆ ಮನವಿ ಸಲ್ಲಿಸಿ’ ಎಂದು ನ್ಯಾಯಪೀಠ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು.

‘ಆರಿಸಿ ಬರುವ ಹೊಸ ಸಂಸದರ ಅಧಿಕಾರವಧಿ ಕೆಲವೇ ತಿಂಗಳು ಇರುತ್ತೆಯಾದ್ದರಿಂದ ಚುನಾವಣೆ ನಡೆಸುವ ಉದ್ದೇಶ ಈಡೇರುವುದಿಲ್ಲ.‌ ಈ ಉಪ ಚುನಾವಣೆಯಿಂದ ಜನರ ತೆರಿಗೆ ಹಣ ಪೋಲಾಗಲಿದೆ. ಆದ್ದರಿಂದ ಚುನಾವಣೆ ತಡೆ ಹಿಡಿಯಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !