ರಾಮನಗರದಲ್ಲಿ ಮೈತ್ರಿ ಸರ್ಕಾರದಿಂದ ಚುನಾವಣಾ ಅಕ್ರಮ: ಬಿಜೆಪಿ ಆರೋಪ

7

ರಾಮನಗರದಲ್ಲಿ ಮೈತ್ರಿ ಸರ್ಕಾರದಿಂದ ಚುನಾವಣಾ ಅಕ್ರಮ: ಬಿಜೆಪಿ ಆರೋಪ

Published:
Updated:

ರಾಮನಗರ: ಇಲ್ಲಿನ ಉಪ ಚುನಾವಣೆಯಲ್ಲಿ‌ ಕೊನೆಯ ಒಂದು ಗಂಟೆ ಅವಧಿಯಲ್ಲಿ ಶೇ 20ಕ್ಕೂ ಹೆಚ್ಚು ಮತದಾನ‌ ನಡೆದಿದ್ದು, ಜೆಡಿಎಸ್- ಕಾಂಗ್ರೆಸ್ ಸೇರಿ‌ ಚುನಾವಣಾ ಅಕ್ರಮ ಎಸಗಿವೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್ ಆರೋಪಿಸಿದರು.

ಬಿಜೆಪಿ ಏಜೆಂಟರನ್ನು ಮತಗಟ್ಟೆಯಿಂದ ದೂರ ಮಾಡಿ, ಕೆಲವು ಕಡೆ ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರೇ ಅಕ್ರಮವಾಗಿ‌ ಮತದಾನ ಮಾಡಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು‌ ನೀಡಲಾಗುವುದು ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

'ಡಿ.ಕೆ. ಶಿವಕುಮಾರ್ ಅವರು ಕಳೆದ ಬುಧವಾರ ರಾತ್ರಿ ದಿಢೀರ್ ಎಂದು ವಿಶೇಷ ವಿಮಾನದಲ್ಲಿ ಬಂದು ಪುನಃ ಬಳ್ಳಾರಿಗೆ ಏಕೆ ವಾಪಸ್ ಆದರು. ಚಂದ್ರಶೇಖರ್ ಕಣದಿಂದ ಹಿಂದೆ‌ ಸರಿಯಲು ಎಷ್ಟು ಹಣದ ಆಮಿಷ ಒಡ್ಡಿದರು ಎಂಬುದು ಗೊತ್ತಿದೆ. ನಾಯಕರ ಒಪ್ಪಿಗೆ ಪಡೆದು ಅದನ್ನೆಲ್ಲ ಬಹಿರಂಗಪಡಿಸುತ್ತೇನೆ' ಎಂದರು.

ರಾಮನಗರವನ್ನು ಪಕ್ಷದ ವರಿಷ್ಠರು ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕು. ಲೋಕಸಭೆ ಚುನಾವಣೆಗೆ ನಾವು ಹೇಳಿದ ಅಭ್ಯರ್ಥಿಯನ್ನೇ ಹಾಕಬೇಕು. ಇಲ್ಲವಾದರೆ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ‌ ಎಂದು ಅವರು ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !