ಎಲೆಕ್ಟ್ರಿಕ್‌ ಬಸ್‌: ಖಾಸಗಿಯವರಿಗೆ ಹೊಣೆ ಇಲ್ಲ: ತಮ್ಮಣ್ಣ

7
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ

ಎಲೆಕ್ಟ್ರಿಕ್‌ ಬಸ್‌: ಖಾಸಗಿಯವರಿಗೆ ಹೊಣೆ ಇಲ್ಲ: ತಮ್ಮಣ್ಣ

Published:
Updated:

ಬೆಂಗಳೂರು: ನಗರದಲ್ಲಿ ಎಲೆಕ್ಟ್ರಿಕ್‌ ಬಸ್‌ ಗಳನ್ನು ಬಿಎಂಟಿಸಿ ಮೂಲಕವೇ ಓಡಿಸಲಾಗುತ್ತದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮಂಗಳವಾರ ತಿಳಿಸಿದರು.

ಸದ್ಯದಲ್ಲೇ 80 ಎಲೆಕ್ಟ್ರಿಕ್‌ ಬಸ್‌ಗಳು ನಗರದ ರಸ್ತೆಗಳಲ್ಲಿ ಓಡಾಡಲಿವೆ. ಗುತ್ತಿಗೆ ಆಧಾರದಲ್ಲಿ ಬಸ್‌ಗಳನ್ನು ಓಡಿಸುವ ಯೋಜನೆಗೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡಲಿದ್ದು, ಬಿಎಂಟಿಸಿ ಮತ್ತು ಬಸ್‌ ಒದಗಿಸುವ ಖಾಸಗಿ ಕಂಪನಿ ಜಂಟಿ ಮಾಲೀಕತ್ವದಲ್ಲಿ ಬಸ್‌ಗಳನ್ನು ಖರೀದಿಸಬೇಕು ಎಂಬ ಷರತ್ತು ಹಾಕಿದೆ. ಕೇಂದ್ರ ಸರ್ಕಾರ 12 ಮೀ. ಉದ್ದದ ಎ.ಸಿ ಬಸ್‌ಗೆ ₹1 ಕೋಟಿ ಹಾಗೂ ಸಾಮಾನ್ಯ ಬಸ್‌ಗೆ ₹ 75 ಲಕ್ಷ ಸಬ್ಸಿಡಿ ನೀಡಲಿದೆ.

‘ಈ ಬಸ್‌ಗಳನ್ನು ನಿಲ್ಲಿಸಲು ಖಾಸಗಿ ಯವರಿಗೆ ನಮ್ಮ ಎಲ್ಲ ಮೂಲಸೌಕರ್ಯ ಗಳನ್ನು ಅವರಿಗೆ ಒದಗಿಸಬೇಕಿದೆ. ಅವರಿಗೆ ಅಷ್ಟು ವ್ಯವಸ್ಥೆ ಮಾಡಿಕೊಡುವ ಬದಲು ನಾವೇ ಓಡಿಸುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !