ಗುರುವಾರ , ನವೆಂಬರ್ 14, 2019
19 °C

ಇಸ್ತ್ರಿ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶ: ವ್ಯಕ್ತಿ ಸಾವು

Published:
Updated:

ಬೆಂಗಳೂರು: ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ಇಸ್ತ್ರಿ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಬಿಜಯ್‌ಕುಮಾರ್‌ (42) ಎಂಬುವರು ಮೃತಪಟ್ಟಿದ್ದಾರೆ.

‘ಉತ್ತರ ಪ್ರದೇಶದ ಬಿಜಯ್‌ ಕುಮಾರ್ ಪತ್ನಿ, ಇಬ್ಬರು ಮಕ್ಕಳ ಜೊತೆ ಅರಕೆರೆಯಲ್ಲಿ ನೆಲೆಸಿದ್ದರು. ಇಸ್ತ್ರಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು’ ಎಂದು ಪೊಲೀಸರು ಹೇಳಿದರು. 

‘ಅ. 29ರಂದು ಹುಳಿಮಾವು ಹಾಗೂ ಸುತ್ತಮುತ್ತ ಜೋರು ಮಳೆ ಯಿಂದಾಗಿ  ಬಿಜಯ್‌ ಅವರ ಅಂಗಡಿಗೆ ನೀರು ನುಗ್ಗಿತ್ತು. ಅ. 30ರಂದು ಬೆಳಿಗ್ಗೆ ಅಂಗಡಿಗೆ ಬಂದಿದ್ದ ಅವರು ನೀರು ತೆರವುಗೊಳಿಸಿದ್ದರು. ವಿದ್ಯುತ್ ಚಾಲಿತ ಇಸ್ತ್ರಿಪೆಟ್ಟಿಗೆ ಸ್ವಿಚ್‌ಆನ್‌ ಮಾಡಿ ಕೆಲಸ ಆರಂಭಿ ಸಿದಾಗ, ವಿದ್ಯುತ್‌ ಸ್ಪರ್ಶಿಸಿ ಅವರು ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)