ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಶಿಬಿರಗಳ ಸ್ಥಿತಿಗತಿ: ಎರಡು ವಾರದಲ್ಲಿ ಕ್ರಮಕ್ಕೆ ಆದೇಶ

ಆನೆ ಶಿಬಿರಗಳ ಸ್ಥಿತಿಗತಿ–ಹೈಕೋರ್ಟ್ ತರಾಟೆ
Last Updated 21 ನವೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಆನೆ ಶಿಬಿರಗಳ ಸ್ಥಿತಿಗತಿ ಸುಧಾರಿಸುವ ಕುರಿತು ತಜ್ಞರ ಸಮಿತಿ ನೀಡಿರುವ ಶಿಫಾರಸುಗಳ ಜಾರಿಗೆ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರವನ್ನುಹೈಕೋರ್ಟ್ ಗುರುವಾರ ತರಾಟೆಗೆ ತೆಗೆದುಕೊಂಡಿದೆ.

ಸರ್ಕಾರಎರಡು ವಾರದಲ್ಲಿ ಶಿಫಾರಸುಗಳ ಜಾರಿಗೆ ಕ್ರಮ ಕೈಗೊಂಡು ಆ ಕುರಿತು ವರದಿ ಸಲ್ಲಿಸಬೇಕು ಎಂದು ಕೋರ್ಟ್‌ ಆದೇಶ ನೀಡಿತು.

ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿಎ.ಎಸ್.ಓಕಾ ಹಾಗೂ ನ್ಯಾಯಮೂರ್ತಿಪ್ರದೀಪ್ ಸಿಂಗ್ ನೇತೃತ್ವದ ವಿಭಾಗೀಯ ಪೀಠ, ಸರ್ಕಾರದ ಧೋರಣೆಗೆಬೇಸರ ವ್ಯಕ್ತಪಡಿಸಿತು.

ಸರ್ಕಾರಿ ವಕೀಲಬಿ.ವಿ.ಕೃಷ್ಣಂ,ತಜ್ಞರ ಸಮಿತಿ ಶಿಫಾರಸು ಜಾರಿಗೆ ಕ್ರಮ ಕೈಗೊಳ್ಳಲಿದೆ. ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕು. ಮೊದಲಿಗೆ ಎರಡು ಶಿಬಿರಗಳನ್ನು ಸ್ಥಳಾಂತರ ಮಾಡಲಾಗುವುದು ಎಂದರು.

ಅದಕ್ಕೆ ಸಿಟ್ಟಾದ ಮುಖ್ಯ ನ್ಯಾಯಮೂರ್ತಿ, ನವೆಂಬರ್‌5ರಂದೇ ನ್ಯಾಯಪೀಠ ತಜ್ಞರ ಸಮಿತಿ ಶಿಫಾರಸು ಜಾರಿಗೊಳಿಸಿ ಎಂದು ಆದೇಶ ನೀಡಿತ್ತು.ಅದನ್ನು ಪಾಲನೆ ಮಾಡಿಲ್ಲ.ಇದೀಗ ಕೋರ್ಟ್ ಆದೇಶ ‘ದುರ್ಬಲ’ಗೊಳಿಸಲು ಯತ್ನಿಸುತ್ತಿದೆ ಎಂದೆನಿಸುತ್ತಿದೆ. ಶಿಬಿರಗಳನ್ನು ಸ್ಥಳಾಂತರಿಸುವ ಕೆಲಸಕ್ಕಿಂತ ಮೊದಲು ಇರುವ ಶಿಬಿರಗಳಿಗೆ ಮೂಲಸೌಕರ್ಯ ಒದಗಿಸಿ ಎಂದು ತಾಕೀತು ಮಾಡಿತು.

ಡಿ.6ರೊಳಗೆ ಸರ್ಕಾರತಜ್ಞರ ಸಮಿತಿ ಶಿಫಾರಸು ಜಾರಿಗೆ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.

ವೈಲ್ಡ್ ಲೈಫ್ ಆರ್ಗನೈಸೇಷನ್ ಟ್ರಸ್ಟ್‌ನ ಟ್ರಸ್ಟಿ ಕೆ.ಎಂ.ಚಿನ್ನಪ್ಪ, ತಮಿಳುನಾಡಿನ ವೈದ್ಯ ಡಾ.ಕಳೈವಣ್ಣನ್ ಮತ್ತು ನೋಯಿಡಾದವೈದ್ಯ ಡಾ.ಎನ್.ವಿ.ಕೆ.ಅಶ್ರಫ್ ತಜ್ಞರ ತಂಡ ಅ.16 ರಿಂದ 19ರವರೆಗೆ ರಾಜ್ಯದ ಆರು ಆನೆ ಶಿಬಿರಗಳಗೆ ಭೇಟಿ ನೀಡಿ ಮತ್ತು ಅಧ್ಯಯನ ನಡೆಸಿ ಬಹುತೇಕ ಆನೆ ಶಿಬಿರಗಳಲ್ಲಿ ಸಮರ್ಪಕವಾಗಿ ಮೂಲಸೌಕರ್ಯ ಹಾಗೂ ವೈದ್ಯಕೀಯ ಸೌಲಭ್ಯಗಳು ಇಲ್ಲ ಎಂದು ಸಮಗ್ರ ವರದಿ ಸಲ್ಲಿಸಿತ್ತು.

ಶಿಬಿರಗಳಲ್ಲಿ 3 ವರ್ಷದಲ್ಲಿ18 ಆನೆಗಳ ಸಾವು

ಆರು ಆನೆ ಶಿಬಿರಗಳಲ್ಲಿ96 ಆನೆಗಳು ಇದ್ದವು. 2016ರಿಂದ 2019ರಲ್ಲಿ 18 ಆನೆಗಳು ಸಾವನ್ನಪ್ಪಿವೆ. 2019ರಲ್ಲಿಯೇ ನಾಲ್ಕು, 2018ರಲ್ಲಿ ಏಳು ಆನೆ ಸಾವನ್ನಪ್ಪಿವೆ. ನಾಲ್ಕು ಅಪ್ರಾಪ್ತ ಆನೆಗಳು, 14 ವಯಸ್ಕ ಆನೆಗಳು ಅಸುನೀಗಿವೆ. ಅನೇಕ ಆನೆಗಳು ಸೂಕ್ತ ಚಿಕಿತ್ಸೆ ಇಲ್ಲದೆ ಅನಾರೋಗ್ಯದಿಂದ ಸಾವನ್ನಪ್ಪಿವೆ ಎಂದು ತಜ್ಞರ ವರದಿಯಲ್ಲಿ ತಿಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT