ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಕಾಡಾನೆ ಹಾವಳಿ: ಬೆಳೆ ನಾಶ

Last Updated 4 ನವೆಂಬರ್ 2019, 15:13 IST
ಅಕ್ಷರ ಗಾತ್ರ

ಸಿದ್ದಾಪುರ: ಇಂಜಲಗರೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ಭತ್ತದ ಗದ್ದೆ ಸೇರಿದಂತೆ ಕಾಫಿ ತೋಟದಲ್ಲಿ ಕಾಡಾನೆಗಳು ದಾಂಧಲೆ ನಡೆಸುತ್ತಿವೆ.

ಕಳೆದ ಕೆಲವು ದಿನಗಳಿಂದ ಅಮ್ಮತ್ತಿ ಗ್ರಾ.ಪಂ. ವ್ಯಾಪ್ತಿಯ ಅಂಜಲಗರೆ, ಪುಲಿಯೇರಿ, ಗೌರಿ ಬಾಗದಲ್ಲಿ ಕಾಡಾನೆ ಹಾವಳಿ ನಿರಂತರವಾಗಿದೆ. ಕಾಫಿತೋಟದಲ್ಲಿ ಬೀಡು ಬಿಡುವ ಕಾಡಾನೆಗಳು ಕಾಫಿಗಿಡಗಳನ್ನು ನಾಶಗೊಳಿಸಿವೆ. ಅಲ್ಲದೆ, ಪುಲಿಯೇರಿ ಗ್ರಾಮದ ಕಾವೇರಿ ಎಸ್ಟೇಟ್, ಗೌರಿ ಎಸ್ಟೇಟ್ ನಲ್ಲಿ ಕಾಡಾನೆಗಳು ದಾಳಿ ನಡೆಸಿ ಕಾಫಿಗಿಡಗಳನ್ನು ದ್ವಂಸ ಮಾಡಿವೆ. ಮತ್ತೊಂದೆಡೆ ಭತ್ತದ ಗದ್ದೆಗಳಿಗೂ ಲಗ್ಗೆ ಇಟ್ಟ ಕಾಡಾನೆ, ನಾಟಿ ಮಾಡಲಾಗಿರುವ ಭತ್ತವನ್ನು ನಾಶ ಮಾಡಿವೆ. ಕಳತ್ಮಾಡು ಗ್ರಾ.ಪಂ ವ್ಯಾಪ್ತಿಯಲ್ಲಿಯೂ ಕಳೆದ ಕೆಲವು ದಿನಗಳಿಂದ ಕಾಡಾನೆ ಹಾವಳಿ ಮುಂದುವರಿದಿದ್ದು, ಭತ್ತದ ಗದ್ದೆಗಳು ಕಾಡಾನೆ ದಾಳಿಗೆ ನಾಶವಾಗಿದೆ.

ಕಾಡಾನೆ ಹಾವಳಿಯಿಂದಾಗಿ ಕಾರ್ಮಿಕರು, ಸಾಲಾ ಮಕ್ಕಳು ಭಯಭೀತರಾಗಿದ್ದು, ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗಟ್ಟಬೇಕೆಮದು ಬೆಳೆಗಾರರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT