ಗುರುವಾರ , ಜೂನ್ 24, 2021
22 °C
ಆಸ್ತಿ ನೋಂದಣಿ: ₹ 62 ಕೋಟಿ ವಂಚನೆ

ಶುಲ್ಕ: ಇ.ಸಿ.ಯಲ್ಲಿ ನಮೂದು

ಕೆ.ಜೆ.ಮರಿಯಪ್ಪ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಸ್ತಿ ನೋಂದಣಿ ಸಮಯದಲ್ಲಿ ಮಾರ್ಗಸೂಚಿ ದರಕ್ಕಿಂತ ಕಡಿಮೆ ಶುಲ್ಕ ಪಾವತಿಸಿ, ಸರ್ಕಾರಕ್ಕೆ ವಂಚಿಸಿದವರ ಬಂಡವಾಳ ಇನ್ನು ಮುಂದೆ ಬಯಲಿಗೆ ಬರಲಿದ್ದು, ಅಂತಹ ಶುಲ್ಕ ವಂಚನೆಯ ವಿವರಗಳು ಋಣಭಾರ ಪ್ರಮಾಣಪತ್ರದಲ್ಲಿ (ಇ.ಸಿ) ದಾಖಲಾಗಲಿವೆ.

ರಾಜ್ಯದ ವಿವಿಧೆಡೆ ಮಾರ್ಗಸೂಚಿ ದರಕ್ಕಿಂತ ಕಡಿಮೆ ಮೊತ್ತಕ್ಕೆ ಆಸ್ತಿ ನೋಂದಣಿ ಮಾಡಿಸಿ ಶುಲ್ಕ ವಂಚಿಸುತ್ತಿರುವುದು ದಿನದಿಂದದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಈ ಕ್ರಮ ಕೈಗೊಂಡಿದೆ. ಕಳೆದ ಒಂದು ವರ್ಷದಲ್ಲಿ ನಿಗದಿತ ಶುಲ್ಕ ಕಟ್ಟದ 950ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದ್ದು, ಸರ್ಕಾರಕ್ಕೆ ₹62 ಕೋಟಿ ವಂಚಿಸಲಾಗಿದೆ.

ನಿವೇಶನ, ಮನೆ, ಜಮೀನು ಖರೀದಿಸುವ ಮುನ್ನ ಸಾಮಾನ್ಯವಾಗಿ ನೋಂದಣಿ ಪತ್ರ, ಇತರ ದಾಖಲೆ ಜತೆಗೆ ಪ್ರಮುಖವಾಗಿ ಋಣಭಾರ ಪ್ರಮಾಣಪತ್ರ (ಇ.ಸಿ)ವನ್ನು ಜನರು ಪರಿಶೀಲಿಸುತ್ತಾರೆ. ಈ ಪತ್ರದಲ್ಲಿ ಏನಾದರೂ ಸಮಸ್ಯೆಗಳು ಇವೆಯೆ? ಎಂಬುದನ್ನು ಖಚಿತಪಡಿಸಿಕೊಂಡ ನಂತರ ಖರೀದಿಗೆ ಮುಂದಾಗುತ್ತಾರೆ. ಹಾಗಾಗಿ ಇ.ಸಿ.ಯಲ್ಲಿ ಬಾಕಿ ಇರುವ ಶುಲ್ಕ, ತಪ್ಪು ಮಾಹಿತಿಯ ವಿವರಗಳನ್ನು ನಮೂದಿಸಿ ಮುಂದಿನ ದಿನಗಳಲ್ಲಿ ವಸೂಲಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಆಸ್ತಿ ನೋಂದಣಿಯ ನಂತರ ಪ್ರತಿಯೊಂದನ್ನೂ ಅಧಿಕಾರಿಗಳು ಪರಿಶೀಲಿಸಲಿದ್ದು, ಶುಲ್ಕ ವಂಚನೆ ಪತ್ತೆ ಮಾಡುತ್ತಾರೆ. ವಂಚಿಸಿರುವುದು ಪತ್ತೆಯಾದರೆ ಬಾಕಿ ಇರುವ ಶುಲ್ಕದ ವಿವರಗಳನ್ನು ಇ.ಸಿಯಲ್ಲಿ ನಮೂದಿಸಲಿದ್ದು, ಈ ಬಾಕಿ ಪಾವತಿಸಿದ ನಂತರವೇ ದಾಖಲೆಯಿಂದ ತೆಗೆದುಹಾಕಲಾಗುತ್ತದೆ.

ಇ.ಸಿ.ಯಲ್ಲಿ ನಮೂದಿಸುವುದರಿಂದ ಮುಂದಿನ ದಿನಗಳಲ್ಲಿ ಶುಲ್ಕ ವಂಚನೆ ಕಡಿಮೆಯಾಗಲಿದೆ. ಬಾಕಿ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ
-ಕೆ.ವಿ.ತ್ರಿಲೋಕ್‌ ಚಂದ್ರ, ನೋಂದಣಿ ಹಾಗೂ ಮುದ್ರಾಂಕ ಇಲಾಖೆ ಮಹಾನಿರೀಕ್ಷಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು