ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಗೋಡೆಗೆ ಬಣ್ಣ ಬಳಿದ ಎಂಜಿನಿಯರ್‌ಗಳು

Last Updated 24 ಅಕ್ಟೋಬರ್ 2018, 19:26 IST
ಅಕ್ಷರ ಗಾತ್ರ

ಹೊಸಕೋಟೆ: ಬೆಂಗಳೂರಿನ ಇಂಟೆಲ್ ಇಂಡಿಯಾ ಕಾರ್ಪೊರೇಟ್ ಕಂಪನಿಯ 150 ಎಂಜಿನಿಯರುಗಳು ಮಂಗಳವಾರ ಪಟ್ಟಣದ ಸರ್ಕಾರಿ ಬಾಲಕರ ಮಾಧ್ಯಮಿಕ ಶಾಲೆ ಮತ್ತು ದೊಡ್ಡಹುಲ್ಲೂರಿನ ಸರ್ಕಾರಿ ಶಾಲೆಯ ಗೋಡೆಗಳಿಗೆ ಬಣ್ಣ ಬಳಿದರು.

ತಮ್ಮ ಶಾಲೆಗೆ ಬಂದು ಕೈಯಲ್ಲಿ ಬ್ರಷ್ ಹಿಡಿದ ಯುವಕ ಯವತಿಯರು ಬಣ್ಣ ಬಳಿಯುತ್ತಿರುವುದನ್ನು ನೋಡಿದ ಶಾಲೆಯ ಶಿಕ್ಷಕಿಯರು ಅವರೊಂದಿಗೆ ತಾವೂ ಬ್ರಷ್ ಹಿಡಿದು ಸಾಥ್ ನೀಡಿದರು. ಇಂಟೆಲ್ ಕಂಪನಿಯ ರವಿ ಗೋಪಾಲ್ ಮಾತನಾಡಿ, ‘ನಮ್ಮ ಕೆಲಸದ ಜತೆಯಲ್ಲಿ ಸಮಾಜದಲ್ಲಿನ ಸಾರ್ವಜನಿಕರಿಗೆ ನೆರವಾಗುವಂತಹ ಕೆಲಸ ಮಾಡುವುದು ನಮ್ಮ ಜವಾಬ್ದಾರಿ. ಇತ್ತೀಚೆಗೆ ಬೆಳ್ಳಂದೂರು ಕೆರೆ ಬಳಿ ಗಿಡಗಳನ್ನು ನೆಡಲಾಯಿತು. ಗ್ರಾಮಾಂತರ ಪ್ರದೇಶದಲ್ಲಿನ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವುದು ಮತ್ತು ಅಲ್ಲಿನ ಮಕ್ಕಳಿಗೆ ಆಂಗ್ಲ ಭಾಷೆಯಲ್ಲಿ ಹೆಚ್ಚಿನ ಪ್ರೌಢಿಮೆ ಪಡೆಯುವಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ’ ಎಂದರು. ಶಿಕ್ಷಣ ಫೌಂಡೇಷನ್ ಸಂಸ್ಥೆ ಸಹಯೋಗದಲ್ಲಿ ಕಾರ್ಯಕ್ರಮ ಕೈಗೊಂಡಿದ್ದು ₹ 1.50 ಲಕ್ಷ ವೆಚ್ಚದಲ್ಲಿ ಬಣ್ಣ ಬಳಿಯಲಾಗಿದೆ ಎಂದು ಫೌಂಡೇಷನ್‌ನ ತಾಲ್ಲೂಕು ಸಮನ್ವಯಾಧಿಕಾರಿ ರಾಜಣ್ಣ ಹೇಳಿದರು.

ಮಾದರಿ ಶಾಲೆಯಾಗಿರುವ ನಮ್ಮ ಶಾಲೆಯ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಲ್ಲಿ ಈಗಾಗಲೇ ಕೆಲವು ಕಾರ್ಪೊರೇಟ್ ಕಂಪನಿಗಳು ಗ್ರಂಥಾಲಯ ಸೇರಿದಂತೆ ಇತರ ಸೌಲಭ್ಯ ಕಲ್ಪಿಸಿವೆ ಎಂದು ಮುಖ್ಯ ಶಿಕ್ಷಕ ಕೆ. ರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT