ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಗಣಪತಿ!

ಅಕ್ಷರ ಗಾತ್ರ

ಎ, ಬಿ, ಸಿ, ಡಿ..... ಇಂಗ್ಲಿಷಿನ 26 ಅಕ್ಷರಗಳು ಬೃಹತ್‌ ಜ್ಞಾನ ಭಂಡಾರವನ್ನೇ ಸೃಷ್ಟಿಸಿವೆ.ಬಿಗ್‌ ಲೆಟರ್‌, ಸ್ಮಾಲ್‌ ಲೆಟರ್‌, ಇವೆಲ್ಲವೂ ನಮಗೆ ಪರಿಚಿತವೇ. ಈ ಅಕ್ಷರಗಳು ಗಣಪತಿಯಾದರೆ! ಅಕ್ಷರಗಳು ತನ್ನ ಆಕಾರಗಳನ್ನು ಬದಲಿಸಿಕೊಂಡು ವಿಶೇಷವಾದ ರೂಪು ತಳೆದರೆ ಹೇಗಿರುತ್ತದೆ?

ವೃತ್ತಿಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿರುವ ವೆಂಕಟೇಶ್‌ ಎಲ್ಲೂರು ಅವರು ಅಕ್ಷರಗಳಿಗೆ ಜೀವ ತುಂಬಿ ಬಗೆ ಬಗೆ ಗಣಪನ ಆಕಾರಗಳನ್ನು ರೂಪಿಸುತ್ತಿರುವ ಕಲಾವಿದ.

ಕಳೆದ 15 ವರ್ಷಗಳಿಂದ ಅಕ್ಷರಗಳಲ್ಲಿ ಗಣಪನನ್ನು ಮೂಡಿಸುವ ಕಲೆ ರೂಢಿಸಿಕೊಂಡಿದ್ದಾರೆ. ಓದು, ಆಟ, ಪಾಠದೊಡನೆ ಹುಟ್ಟಿದ ಈ ಹವ್ಯಾಸವನ್ನೇ ತನ್ನ ಬದುಕಿನ ದಾರಿಯನ್ನಾಗಿಸಿಕೊಂಡಿದ್ದಾರೆ.

ಹೆಸರು ವೆಂಕಟೇಶ್ ಆದರೂ ಇವರನ್ನು ಗಣೇಶ ಎಂದೇ ಗುರುತಿಸುತ್ತಾರಂತೆ. ಇವರಿಗೆ ಯಾರುಎಷ್ಟೇ ಅಕ್ಷರಗಳನ್ನು ನೀಡಿದರೂ ಅದಕ್ಕೆ ಗಣಪನ ಆಕಾರ ನೀಡುತ್ತಾರೆ.

ಮಕ್ಕಳ ನಾಮಕರಣ, ಹುಟ್ಟಿದ ಹಬ್ಬ, ಮನೆ ಗೃಹ ಪ್ರವೇಶ ಹೀಗೆ ಶುಭಾ ಸಮಾರಂಭಗಳಿಗೆ ತಕ್ಕಂತೆ ಗಣಪನನ್ನು ಬಿಡಿಸುತ್ತಾರೆ. ಎರಡು ಕೈ ಗಣಪ, ನಾಲ್ಕು ಕೈ ಗಣಪ, ಮುಖವಾಡದ ಗಣಪ ಹೀಗೆ4 ರೀತಿಯ ಗಣಪನನ್ನು ಬಿಡಿಸುತ್ತಾರೆ.ಜೊತೆಗೆ ದೀಪಗಳನ್ನೂ ಮಾಡುತ್ತಾರೆ. ಈಗಾಗಲೇ ವೆಂಕಟೇಶ್‌ ರಚಿಸಿರುವ ಗಣಪನ ಚಿತ್ರಗಳು ಅನೇಕ ಕಡೆ ಕಾಣಸಿಗುತ್ತಿವೆ.

‘ನನಗೆ ಅಕ್ಷರ ಕಂಡ ಕೆಲವು ಸೆಕೆಂಡ್‌ಗಳಲ್ಲೇ ತನ್ನ ತಲೆಯಲ್ಲಿ ಗಣಪನ ಆಕಾರ ಕೂರುತ್ತದೆ, ನನಗೆ ಯೋಚಿಸಿ ಬರೆಯಬೇಕು ಎಂದೇನು ಇಲ್ಲ. ಸಿಂಗಾಪುರ, ದಕ್ಷಿಣ ಆಫ್ರಿಕಾ, ಅಮೆರಿಕ, ದುಬೈ, ಆಸ್ಟ್ರೇಲಿಯಾ, ಮಲೇಷ್ಯಾ ಹೀಗೆ ಹಲವು ಕಡೆಗಳಿಂದ ಅಕ್ಷರ ಗಣಪನಿಗೆ ಬೇಡಿಕೆಯೂ ಬರುತ್ತಿದೆ. ₹500 ರಿಂದ ಆರಂಭವಾಗಿ ₹15,000 ವರೆಗೆ ಬೆಲೆ ಬಾಳುವ ಅಕೃತಿಗಳು ದೊರೆಯುತ್ತವೆ’ ಎನ್ನುತ್ತಾರೆ ಅವರು.

‘ಬೆಳಿಗ್ಗೆಯಿಂದ ಸಂಜೆವರೆಗೆ ಗಣಪನನ್ನು ಮಾಡುತ್ತಾ ಕೂತರೆ 150 ಗಣಪಗಳನ್ನು ಬಿಡಿಸುವೆ. ಮೊದಮೊದಲು ಗಣಪನನ್ನು ಕೈಯಲ್ಲಿ ಬರೆಯುತ್ತಿದ್ದೆ. ಜನರ ಬೇಡಿಕೆಯ ನಂತರ ಗಣಪನಿಗೆ ಡಿಜಿಟಲ್‌ ರೂಪ ನೀಡುತ್ತಾ ಬಂದಿದ್ದೇನೆ. ಇಲ್ಲಿಯವರೆಗೂ ಎಲ್ಲೂ ಪ್ರದರ್ಶನಗಳನ್ನು ಮಾಡಿಲ್ಲ ಆದರೆ ಚಿತ್ರಸಂತೆಯಲ್ಲಿ ಒಮ್ಮೆ ಭಾಗವಹಿಸಿದ್ದೆ ಅಷ್ಟೇ. ಅಲ್ಲಿಯೇಹಲವಾರು ಗಣಪತಿ ಚಿತ್ರಗಳು ಮಾರಾಟವಾದವು’ ಎಂದು ಆರ್ಥಿಕವಾಗಿ ಸಬಲರಾದ ಬಗೆಯನ್ನು ವೆಂಕಟೇಶ್‌ ವಿವರಿಸುತ್ತಾರೆ.

ಈ ಗಣಪನನ್ನು ಮದುವೆ ಕರೆಯೋಲೆ, ಮದುವೆ ಬ್ಯಾಗ್‌ ಚೀಲಗಳು, ನೇಮ್‌ ಬೋರ್ಡ್‌, ಗೃಹಪ್ರವೇಶದ ಬ್ಯಾನರ್‌ಗಳು, ಮದುವೆ ಬ್ಯಾನರ್‌ಗಳು, ಉಡುಗೊರೆ ನೀಡಲು, ಶೋಗಾಗಿ ಇಡಲು ಈ ಗಣಪನನ್ನು ತೆಗೆದುಕೊಳ್ಳುತ್ತಾರೆ.

ಬಾಯ್ಮಾತಿನ ಪ್ರಚಾರದಿಂದಲೇ ಅನೇಕ ಕಡೆಗಳಿಂದ ಬೇಡಿಕೆ ಬರುತ್ತಿದೆ.. ಸಾಮಾಜಿಕ ಜಾಲತಾಣವೂ ಪ್ರಚಾರಕ್ಕೆ ಸಹಾಯ ಮಾಡಿದೆ ಎನ್ನುತ್ತಾರೆ. ಇವರನ್ನು ’myganesha' ಎಂದು ಫೇಸ್‌ಬುಕ್‌ನಲ್ಲಿ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT