ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯ ನಿಧಿ ಬಡ್ಡಿ ದರ ಶೇ 8.65ಕ್ಕೆ ಹೆಚ್ಚಳ

Last Updated 21 ಫೆಬ್ರುವರಿ 2019, 20:13 IST
ಅಕ್ಷರ ಗಾತ್ರ

ನವದೆಹಲಿ: ಪಿಂಚಣಿ ನಿಧಿ ಸಂಸ್ಥೆಯಾಗಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಪ್ರಸಕ್ತ ಹಣಕಾಸು ವರ್ಷದ (2018–19) ಬಡ್ಡಿ ದರವನ್ನು ಶೇ 0.10ರಷ್ಟು ಹೆಚ್ಚಿಸಲು ನಿರ್ಧರಿಸಿದೆ.

2017–18ನೆ ವರ್ಷಕ್ಕೆ ನೀಡಲಾಗುತ್ತಿದ್ದ ಶೇ 8.55 ಬಡ್ಡಿ ದರವು ಶೇ 8.65ರಷ್ಟಕ್ಕೆ ಏರಿಕೆಯಾಗಲಿದೆ.

ಈ ನಿರ್ಧಾರವು ಲೋಕಸಭಾ ಚುನಾವಣೆ ಮುಂಚಿನ ಇನ್ನೊಂದು ಕೊಡುಗೆಯಾಗಿದೆ. ಭವಿಷ್ಯ ನಿಧಿಯ 6 ಕೋಟಿ ಸದಸ್ಯರಿಗೆ ಇದರಿಂದ ಪ್ರಯೋಜನ ಲಭಿಸಲಿದೆ.

‘ಭವಿಷ್ಯ ನಿಧಿ ಸಂಘಟನೆಯ ಕೇಂದ್ರೀಯ ಮಂಡಳಿಯ (ಸಿಬಿಟಿ) ಎಲ್ಲ ಟ್ರಸ್ಟಿಗಳು ಬಡ್ಡಿ ದರ ಹೆಚ್ಚಿಸುವ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಬಡ್ಡಿ ದರ ಹೆಚ್ಚಿಸುವ ಈ ಪ್ರಸ್ತಾವವನ್ನು ಅನುಮೋದನೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳಿಸಲಾಗುವುದು’ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ಹೇಳಿದ್ದಾರೆ.

‘ಸಿಬಿಟಿ’ ಅನುಮೋದಿಸಿದ ಬಡ್ಡಿ ದರಕ್ಕೆ ಹಣಕಾಸು ಸಚಿವಾಲಯದ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಬಡ್ಡಿಯನ್ನು ಸಂಘಟನೆಯ ಸದಸ್ಯರ ಖಾತೆಗೆ ವರ್ಗಾಯಿಸಲಾಗುವುದು.

***

ಭವಿಷ್ಯ ನಿಧಿ ಬಡ್ಡಿ ದರ ವಿವರ

ವರ್ಷ; ಬಡ್ಡಿ ದರ

2018–19 8.65%

2017-18 8.55%

2016–17 8.65%

2015–16 8.80%

2014–15 8.75%

2013–14 8.75%

2012–13 8.50%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT