ಎಪಿಕ್ ಕಾರ್ಡ್‌ ಇಲ್ಲದಿದ್ದರೆ ಚಿಂತೆ ಬೇಡ, ಇಷ್ಟಿದ್ದರೆ ನೀವೂ ವೋಟ್ ಹಾಕಬಹುದು

ಬುಧವಾರ, ಏಪ್ರಿಲ್ 24, 2019
23 °C

ಎಪಿಕ್ ಕಾರ್ಡ್‌ ಇಲ್ಲದಿದ್ದರೆ ಚಿಂತೆ ಬೇಡ, ಇಷ್ಟಿದ್ದರೆ ನೀವೂ ವೋಟ್ ಹಾಕಬಹುದು

Published:
Updated:

ಬೆಂಗಳೂರು: ಮತದಾರರ ಗುರುತಿನ ಚೀಟಿ (ಮತದಾರರ ಫೋಟೊ ಸ್ಲಿಪ್) ಮಾಹಿತಿಗಾಗಿಯೇ ಹೊರತು ಮತಗಟ್ಟೆಯಲ್ಲಿ ಗುರುತಿನ ದಾಖಲೆಯಲ್ಲ. ಹಾಗಾಗಿ, ಮತದಾರರ ಗುರುತಿನ ಚೀಟಿ ಇಲ್ಲದೆಯೂ ಮತದಾನ ಕೇಂದ್ರದಲ್ಲಿ ಈ ಕೆಳಗಿನ ದಾಖಲೆಗಳನ್ನು ಗುರುತಿನ ಚೀಟಿಯಾಗಿ ಬಳಸಬಹುದು ಎಂದು ಚುನಾವಣಾ ಆಯೋಗ ಹೇಳಿದೆ.

ಪಾಸ್‌ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಸೇವಾ ಗುರುತಿನ ಚೀಟಿ (ಕೇಂದ್ರ, ರಾಜ್ಯ ಸರ್ಕಾರ ಇಲ್ಲವೇ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಗುರುತಿನ ಚೀಟಿ), ಪಾಸ್‌ಬುಕ್ (ಬ್ಯಾಂಕ್, ಅಂಚೆ ಕಚೇರಿ ನೀಡಿರುವ ಭಾವಚಿತ್ರ ಇರುವ ಬುಕ್), ಪಾನ್ ಕಾರ್ಡ್‌, ಸ್ಮಾರ್ಟ್ ಕಾರ್ಡ್ (ಕಾರ್ಮಿಕ ಸಚಿವಾಲಯದ ಯೋಜನೆಯಡಿಯಲ್ಲಿ ನೀಡಲಾದ ಕಾರ್ಡ್‌), ನರೇಗಾ ಜಾಬ್ ಕಾರ್ಡ್, ಇಎಸ್‌ಐ ಆರೋಗ್ಯ ವಿಮೆ ಕಾರ್ಡ್‌ (ಕಾರ್ಮಿಕ ಸಚಿವಾಲಲಯದಿಂದ ನೀಡಿರುವಂಥದ್ದು), ಭಾವಚಿತ್ರವಿರುವ ಪಿಂಚಣಿ ದಾಖಲೆ, ಆಧಾರ್ ಕಾರ್ಡ್, ಎಂ.ಪಿ, ಎಂಎಲ್‌ಐ ಮತ್ತು ಎಂಎಲ್‌ಸಿಗಳಿಗೆ ನೀಡಿರುವ ಗುರುತಿನ ಚೀಟಿ.

ಬರಹ ಇಷ್ಟವಾಯಿತೆ?

 • 23

  Happy
 • 1

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !