ಸಾಕ್ಷಿ ಪ್ರಜ್ಞಾ ಸಿಂಗ್ ಬಂಧನಕ್ಕೆ ಆಗ್ರಹ

ಸೋಮವಾರ, ಮೇ 27, 2019
24 °C

ಸಾಕ್ಷಿ ಪ್ರಜ್ಞಾ ಸಿಂಗ್ ಬಂಧನಕ್ಕೆ ಆಗ್ರಹ

Published:
Updated:
Prajavani

ಕಲಬುರ್ಗಿ: ‘ಮಹಾತ್ಮ ಗಾಂಧೀಜಿ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ನಾಥುರಾಂ ಗೋಡ್ಸೆ ದೇಶಭಕ್ತ ಎಂಬ ಹೇಳಿಕೆ ನೀಡಿರುವ ಸಾಧ್ವಿ ಪ್ರಜ್ಞಾ ಸಿಂಗ್ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಜ್ಞಾ ಸಿಂಗ್ ಅವರು ಗಾಂಧಿ ಕೊಲೆಗಾರನ ವೈಭವೀಕರಣ ಮಾಡುತ್ತಿದ್ದು, ಇದು ಖಂಡನೀಯ. ರಾಷ್ಟ್ರವಿರೋಧಿ ಕೃತ್ಯಗಳಿಗೆ ಬಿಜೆಪಿಯವರು ಬೆಂಬಲ ನೀಡುತ್ತಿದ್ದಾರೆ. ಸೋಲಿನ ಭೀತಿಯಿಂದ ಮತಗಳ ಧೃವೀಕರಣಕ್ಕೆ ಮುಂದಾಗಿದ್ದಾರೆ. ಪಶ್ಚಿಮ ಬಂಗಾಲ ಸೇರಿ ಹಲವಾರು ಕಡೆ ಧಂಗೆ ಏಳಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !