ಮಾಜಿ ಶಾಸಕ ಸಂಭಾಜಿ ಪಾಟೀಲ ನಿಧನ

ಭಾನುವಾರ, ಮೇ 26, 2019
27 °C

ಮಾಜಿ ಶಾಸಕ ಸಂಭಾಜಿ ಪಾಟೀಲ ನಿಧನ

Published:
Updated:
Prajavani

ಬೆಳಗಾವಿ: ಮಾಜಿ ಶಾಸಕ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮುಖಂಡ ಸಂಭಾಜಿ ಪಾಟೀಲ (60) ಶುಕ್ರವಾರ ರಾತ್ರಿ ತೀವ್ರ ಅನಾರೋಗ್ಯದಿಂದಾಗಿ ನಿಧನರಾದರು.

ಹಲವು ದಿನಗಳಿಂದ ಅವರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಇವರಿಗೆ ಪತ್ನಿ ಉಜ್ವಲಾ, ಒಬ್ಬ ಪುತ್ರಿ ಇದ್ದಾರೆ. ಮಗ ಸಾಗರ ಇತ್ತೀಚೆಗೆ ಅಪಘಾತವೊಂದರಲ್ಲಿ ಸಾವಿಗೀಡಾಗಿದ್ದರು. 

ನಾಲ್ಕು ಸಲ ಮೇಯರ್‌: 2013ರಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಇದಕ್ಕೂ ಮುಂಚೆ ಅವರು ನಾಲ್ಕು ಸಲ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್‌ ಆಗಿದ್ದರು. 1990, 1992, 1993 ಹಾಗೂ 1994ರಲ್ಲಿ ಮೇಯರ್‌ ಆಗಿದ್ದರು.

1991ರಲ್ಲಿ ಎಂಇಎಸ್‌ ಮುಖಂಡರ ಜೊತೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಮೊಟ್ಟ ಮೊದಲ ಬಾರಿಗೆ ಕನ್ನಡ ಭಾಷಿಕರಾದ ಸಿದ್ದನಗೌಡ ಪಾಟೀಲ ಅವರನ್ನು ಮೇಯರ್‌ ಮಾಡಲು ಸಹಕರಿಸಿದ್ದರು.

ಅಭಿವೃದ್ಧಿ ಪರವಾಗಿದ್ದರು: 1990ರಲ್ಲಿ ಹಿಡಕಲ್‌ ಜಲಾಶಯದಿಂದ ಬೆಳಗಾವಿಗೆ ನೀರು ಪೂರೈಸುವ ಯೋಜನೆಯ ಅಡಿಗಲ್ಲು ಸಮಾರಂಭಕ್ಕೆ ಅಂದಿನ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರನ್ನು ಕರೆಯಿಸಿದ್ದರು. ಇದರಿಂದಾಗಿ ಎಂಇಎಸ್‌ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 4

  Sad
 • 1

  Frustrated
 • 2

  Angry

Comments:

0 comments

Write the first review for this !