ಮರಳು ನೀತಿ ಬಗ್ಗೆ ತಜ್ಞರ ಅಭಿಮತ

7

ಮರಳು ನೀತಿ ಬಗ್ಗೆ ತಜ್ಞರ ಅಭಿಮತ

Published:
Updated:

ಎಲ್ಲ ರಾಜ್ಯಗಳಲ್ಲೂ ಮರಳಿಗೆ ವಿಪರೀತ ಬೇಡಿಕೆ ಇದೆ. ಇದರಿಂದ ನೆರೆ ರಾಜ್ಯ ಗಳಲ್ಲೂ ಮರಳು ಅಕ್ರಮ ಸಾಗಣೆ ಮತ್ತು ಮಾರಾಟ ಅಡೆತಡೆಯಿಲ್ಲದೆ ನಡೆಯುತ್ತಿದೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಸುಲಭವಾಗಿ ಗ್ರಾಹಕರಿಗೆ ಮರಳನ್ನು ಪೂರೈಸಲು ಅನುಕೂಲವಾಗುವಂತೆ ವಿವಿಧ ರಾಜ್ಯಗಳು ಮರಳು ನೀತಿ ರೂಪಿಸಿವೆ. ಆದರೂ ಕಾನೂನಿನ ಪರಿಣಾಮಕಾರಿ ಜಾರಿ ಸಾಧ್ಯವಾಗಿಲ್ಲ.

ಕೇಂದ್ರ ಸರ್ಕಾರದ ಗಣಿ ಸಚಿವಾಲಯ ಈಚೆಗೆ ಪ್ರಕಟಿಸಿದ ಮರಳು ಗಣಿಗಾರಿಕೆ ಕರಡು ಶಿಫಾರಸಿನಲ್ಲಿ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ನೀತಿ ಕುರಿತು ಪ್ರಸ್ತಾಪಿಸಿದೆ. ಈ ರಾಜ್ಯಗಳಲ್ಲಿ ಮರಳು ಗಣಿಗಾರಿಕೆ ಮತ್ತು ಎಂ– ಸ್ಯಾಂಡ್‌ಗೆ ಸಂಬಂಧಿಸಿದಂತೆ ಉತ್ತಮ ಮಾದರಿಯ ಕಾನೂನು– ಕಟ್ಟಳೆಗಳಿವೆ ಎಂದೂ ಹೇಳಿದೆ. ಆಂಧ್ರದಲ್ಲಿ ಮುಕ್ತ ಮರಳು ನೀತಿ ಇದೆ. ಗ್ರಾಹಕರಿಗೆ ಉಚಿತವಾಗಿ ಮರಳು ಪೂರೈಸಲಾಗುತ್ತದೆ. ಮರಳು ಬೇಕಾದವರು ಸಾಗಣೆ ವೆಚ್ಚ ಭರಿಸಿದರೆ ಸಾಕು. ತೆಲಂಗಾಣದಲ್ಲಿ ಮರಳನ್ನು ಬ್ಲಾಕ್‌ಗಳಿಂದ ಯಾರ್ಡ್‌ಗಳಿಗೆ ಸಾಗಿಸಲು ಗುತ್ತಿಗೆ ನೀಡಲಾಗುತ್ತದೆ. ಮರಳು ಬೇಕಾದವರು ಟ್ರಕ್‌ಗಳ ಚಾಲಕರ ಜೊತೆ ಒಪ್ಪಂದ ಮಾಡಿಕೊಂಡು, ವೆಬ್‌ಸೈಟ್‌ನಲ್ಲಿ ಬುಕ್‌ ಮಾಡಬಹುದು.

ಇದನ್ನೂ ಓದಿ: ಮರಳ ಕಣಕಣದಲ್ಲೂ ಕಾಂಚಾಣ ಝಣ ಝಣ

ಇಡೀ ಮರಳು ದಂಧೆಯನ್ನು ತೆಲಂಗಾಣ ರಾಜ್ಯ ಖನಿಜ ಅಭಿವೃದ್ಧಿ ನಿಗಮ (ಟಿಎಸ್‌ಎಂಡಿಸಿ) ನಿಯಂತ್ರಿಸುತ್ತದೆ. ಮರಳು ಲಾರಿಗಳ ಮೇಲೆ ಜಿಪಿಎಸ್‌ ವ್ಯವಸ್ಥೆ ಮೂಲಕ ನಿಗಾ ಇಡಲಾಗುತ್ತದೆ.  ಕಳೆದ ವರ್ಷದ ಮದರಾಸ್‌ ಹೈಕೋರ್ಟ್‌ ಆದೇಶದ ಬಳಿಕ ತಮಿಳುನಾಡಿನಲ್ಲಿ ಮರಳು ಗಣಿಗಾರಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಈಗ 27 ಗಣಿಗಳನ್ನು ಹಂತಹಂತವಾಗಿ ಪುನರಾರಂಭಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಅಗತ್ಯವಾದ ಪರಿಸರ ಇಲಾಖೆ ಅನುಮೋದನೆ ಪಡೆಯಲಾಗಿದೆ. ಕರ್ನಾಟಕವೂ ಇ– ಟೆಂಡರ್‌ ಮೂಲಕ ಮರಳು ಬ್ಲಾಕ್‌ಗಳನ್ನು ಹರಾಜು ಹಾಕುತ್ತಿದೆ. ಆದರೆ ಹರಾಜು ಪ್ರಕ್ರಿಯೆ ಮತ್ತು ಕಾನೂನು ಪಾಲನೆ ಕರ್ನಾಟಕದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಬಂದಿಲ್ಲ.

ಇದನ್ನೂ ಓದಿ: ಕಲುಷಿತ ಮರಳು– ಪರಿಣಾಮಗಳೇನು?

ಏನು ಮಾಡಬೇಕು ?

* ಮರಳು ನಿಕ್ಷೇಪಗಳ ಪಾರದರ್ಶಕ ಹರಾಜು ಮತ್ತು ನಿಯಂತ್ರಣಕ್ಕೆ ಪ್ರತ್ಯೇಕ ನಿಗಮ

* ಅಕ್ರಮ ತಡೆಗೆ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ವಿಶೇಷ ಕಾರ್ಯಪಡೆ

* ಸರಕಾರದಿಂದಲೇ ಮರಳು ಸಾಗಾಟ ಮತ್ತು ವಿತರಣೆ

* ಸಾಗಾಟದ ಮೇಲೆ ನಿಗಾ ವಹಿಸಲು ಜಿಪಿಎಸ್‌ ಕಡ್ಡಾಯ

* ಅಕ್ರಮದಲ್ಲಿ ಶಾಮೀಲಾದ ಅಧಿಕಾರಿ, ಸಿಬ್ಬಂದಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕಾನೂನಿಗೆ ತಿದ್ದುಪಡಿ

* ಚುನಾಯಿತ ಪ್ರತಿನಿಧಿಗಳ ವಿರುದ್ಧವೂ ಕಾನೂನು ಕ್ರಮಕ್ಕೆಅವಕಾಶ

* ಫಿಲ್ಟರ್‌ ಮತ್ತು ಇತರೆ ಅಕ್ರಮಗಳ ಮಾಹಿತಿ ನೀಡಿದವರಿಗೆ ಬಹುಮಾನ/ ಮಾಹಿತಿ ಗೌಪ್ಯದ ವ್ಯವಸ್ಥೆ

* ಸ್ಥಳೀಯ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ರೂಪಿಸಬೇಕು

* ಎಂ ಸ್ಯಾಂಡ್‌ ಮತ್ತು ಆಮದು ಮರಳು ವ್ಯಾಪಾರಕ್ಕೆ ಆದ್ಯತೆ ಹಾಗೂ ಹೆಚ್ಚಿನ ಪ್ರಚಾರ

* ತಮಿಳುನಾಡು ಮಾದರಿ ವ್ಯವಸ್ಥೆ ಜಾರಿಗೆ ಪರಿಶೀಲನೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !