ಫಸಲ್‌ ಬಿಮಾ: ಅಕ್ರಮ ವಿಚಾರಣೆಗೆ ಸಮಿತಿ ರಚನೆ

7
ಪ್ರಕರಣದ ಬಗ್ಗೆ ವಿಚಾರಣೆ ನಡೆಸಬೇಕು ಎಂಬ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಅವರ ಸಲಹೆಗೆ ಒಪ್ಪಿಗೆ

ಫಸಲ್‌ ಬಿಮಾ: ಅಕ್ರಮ ವಿಚಾರಣೆಗೆ ಸಮಿತಿ ರಚನೆ

Published:
Updated:

ಬೆಳಗಾವಿ: ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಲ್ಲಿ ವಿಮಾ ಕಂಪನಿಗಳು ಮಾಡಿರುವ ಅಕ್ರಮಗಳ ಆರೋಪದ ಬಗ್ಗೆ ವಿಚಾರಣಾ ಸಮಿತಿ ರಚಿಸಿ ತಿಂಗಳಲ್ಲಿ ವರದಿ ಪಡೆಯಲಾಗುತ್ತದೆ ಎಂದು ಕೃಷಿ ಸಚಿವ ಎನ್‌.ಎಚ್.ಶಿವಶಂಕರ ರೆಡ್ಡಿ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ ಅವರ ಪ್ರಶ್ನೆಗೆ ಉತ್ತರಿಸಿದರು.

ಶಿವಲಿಂಗೇಗೌಡ, ‘ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ 36 ಗ್ರಾಮಗಳ ಪೈಕಿ 32 ಗ್ರಾಮಗಳ ರೈತರಿಗೆ ಸರಿಯಾಗಿ ಪರಿಹಾರ ಸಿಕ್ಕಿದೆ. ಆದರೆ, ಉಳಿದ ಗ್ರಾಮಗಳಲ್ಲಿ ವಾಸ್ತವಿಕ ಇಳುವರಿಯು ಪ್ರಾರಂಭಿಕ ಇಳುವರಿಗಿಂತ ಹೆಚ್ಚಿದೆ ಎಂದು ನೆಪ ಹೇಳಿದರು. ಐದು ಗ್ರಾಮಗಳಲ್ಲಷ್ಟೇ ಇಳುವರಿ ಹೆಚ್ಚಿದ್ದು ಹೇಗೆ? ’ ಎಂದು ಪ್ರಶ್ನಿಸಿದರು.

ವ್ಯವಸ್ಥೆಯ ಲೋಪ ದೋಷಗಳನ್ನು ಸರಿಪಡಿಸಬೇಕು ಎಂದು ಬಿ.ಎಸ್‌.ಯಡಿಯೂರಪ್ಪ ಆಗ್ರಹಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !